ಬೆಂಗಳೂರು: ಲಾಲ್ ಬಾಗ್ ನಲ್ಲಿ ಪಾಪ್ ಕಾರ್ನ್ ತಯಾರಿಸುತ್ತಿದ್ದ ಎಣ್ಣೆಗೆ ಉಗುಳಿದ್ದಾನೆ ಎಂಬ ಆರೋಪದ ಮೇಲೆ ಪಾಪ್ ಕಾರ್ನ್ ಮಾರುತ್ತಿದ್ದ ವ್ಯಕ್ತಿ ಮೇಲೆ ಸಿದ್ದಾಪುರ ಪೊಲೀಸ್ರು ಎಪ್ ಐ ಆರ್ ದಾಖಲಿಸಿದ್ದಾರೆ. ವಾಕಿಂಗ್ ವೇಳೆ ಸಾರ್ವಜನಿಕರು ಪಾಪ್ಕಾರ್ನ್ ಮಾರ್ತಿದ್ದ ನವಾಜ್ ಪಾಷಾ ಎಣ್ಣೆ ಮತ್ತು ಪಾಪ್ ಕಾರ್ನ್ ಗೆ ಉದ್ದೇಶ ಪೂರ್ವಕವಾಗಿ ಉಗುಳುತ್ತಿದ್ದಾನೆಂದು ನವಾಜ್ ಗೆ ಥಳಿಸಿ ಗಲಾಟೆ ಮಾಡಿದ್ರು.
ಸುಮಾರು ಹತ್ತು ವರ್ಷಗಳಿಂದ ನವಾಜ್ ಲಾಲ್ ಬಾಗ್ ನಲ್ಲಿ ಪಾಪ್ ಕಾರ್ನ್ ಮಾರಾಟ ಮಾಡುತ್ತಿದ್ದ. ಕಳೆದ ಶನಿವಾರದಂದು ಪಾಪ್ ಕಾರ್ನ್ ತಯಾರು ಮಾಡುವ ಮೊದಲು ಎಣ್ಣೆ ಪ್ಯಾಕೆಟ್ ನ ಬಾಯಿಂದ ಕಿತ್ತು ಕಾರ್ನ್ ಗೆ ಉಗುಳುತ್ತಿದ್ದ ವೇಳೆ ಸಾರ್ವಜನಿಕರು ನೋಡಿ ಗಲಾಟೆ ಮಾಡಿದ್ರು. ಈ ವೇಳೆ ಬೀಟ್ ನಲ್ಲಿದ್ದ ಪೊಲೀಸ್ರು ಇದನ್ನ ಗಮನಿಸಿ ನವಾಜ್ ನ ವಶಕ್ಕೆ ಪಡೆದು ಠಾಣೆಗೆ ಕರೆದೋಯ್ದು ದೂರು ದಾಖಲಿಸಿದ್ದಾರೆ.
ಇನ್ನೂ ಕೋವಿಡ್ ಸಾಂಕ್ರಾಮಿಕ ಹಿನ್ನೆಲೆ NDMA ಆಕ್ಟ್ ಅಡಿಯಲ್ಲಿ ನವಾಜ್ ವಿರುದ್ಧ ಕೇಸ್ ದಾಖಲಿಸಿದ್ದು. ವಿಚಾರಣೆ ವೇಳೆ ಪಾಪ ಕಾರ್ನ್ ನಾನು ಉಗುಳಿಲ್ಲ ಆದ್ರೆ ಎಣ್ಣೆ ಪ್ಯಾಕೆಟ್ ಬಾಯಿಂದ ತೆಗೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
Kshetra Samachara
14/06/2022 10:44 pm