ಬೆಂಗಳೂರು : ಬೆಂಗಳೂರಿನ ದೇವನಹಳ್ಳಿ ಪೊಲೀಸರು ಖತರ್ನಾಕ್ ಆಸಾಮಿಗೆ ಕೋಳ ತೊಡಿಸಿದ್ದಾರೆ. ಕೆಲಸ ನೀಡಿದ್ದ ಲಾರಿ ಮಾಲೀಕನಿಗೆ ಚಳ್ಳೆಹಣ್ಣು ತಿನ್ನಿಸಿ, ದೆಹಲಿಗೆ ತೆರಳಿ ಕದ್ದ ಹಣದಲ್ಲಿ ಶೋಕಿ ಮಾಡ್ತಿದ್ದ ಆಸಾಮಿಯನ್ನು ಇದೀಗ ದೇವನಹಳ್ಳಿ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಅಟ್ಟಿದ್ದಾರೆ.
ದೇವನಹಳ್ಳಿ ಲಾರಿ ಮಾಲೀಕರ ಲಾರಿ ಕ್ಲೀನರ್ ಆಗಿ ಕೆಲಸ ಮಾಡ್ತಿದ್ದ ಮೊಹ್ಮದ್ ಗೆ ಕಬ್ಬಿಣದ ರಾಡ್ಸ್ ಲೋಡ್ ಪಾರ್ಸಲ್ ಮಾಡುವ ಆರ್ಡರ್ ಸಿಕ್ಕಿತ್ತು. ಒಳ್ಳೆಯ ಮಾಲು ಸಿಕ್ಕಿದ್ದ ಕೂಡಲೇ ಪ್ಲಾನ್ ಮಾಡಿದ ಮೊಹ್ಮದ್ ಕಬ್ಬಿಣದ ರಾಡ್ಸ್ ಲೋಡ್ ಸಮೇತ ರಾಜ್ಯದ ಗಡಿ ಚಿಕ್ಕಬಳ್ಳಾಪುರದ ಬಾಗಪಲ್ಲಿ ಕಡೆಗೆ ಎಸ್ಕೇಪ್ ಆಗಿದ್ದ.
ಕಬ್ಬಿಣದ ರಾಡ್ಸ್ ಲೋಡನ್ನು ಮೂರು ಲಕ್ಷಕ್ಕೆ ಮಾರಿದ್ದ, ಲಾರಿಯನ್ನು ಗಡಿಭಾಗದಲ್ಲಿ ಬಿಟ್ಟು ಪರಾರಿಯಾಗಿದ್ದ. ಲಾರಿಯನ್ನು ಹುಡುಕಾಡಿ ಸಿಗದಿದ್ದಾಗ ಮಾಲೀಕ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಲಾರಿ, ಕಬ್ಬಿಣದ ಲೋಡ್ ಸಮೇತ ನಾಪತ್ತೆಯಾಗಿದೆ, ಹುಡುಕಿಕೊಡಿ ಎಂದು ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಗಣಿಸಿದ ಪೊಲೀಸರು, ಟೆಕ್ನಿಕಲ್ ಆಗಿ ಆರೋಪಿಯನ್ನ ದೆಹಲಿ ಪತ್ತೆಹಚ್ಚಿ ದೇವನಹಳ್ಳಿಗೆ ಕರೆತಂದಿದ್ದಾರೆ.
ಮಾಲು ಲಾರಿಯನ್ನು ವಶಕ್ಕೆ ಪಡೆದು ಮಾಲೀಕನಿಗೆ ಒಪ್ಪಿಸಲಾಗಿದೆ. ಅನ್ನಹಾಕಿದ ದಣಿಗೆ ಕನ್ನ ಹಾಕಲು ಹೋಗಿ ಇಂಗು ತಿಂದ ಮಂಗನಂತಾದ ಮೊಹ್ಮದ್ ಜೈಲಲ್ಲಿ ಕಂಬಿ ಎಣಿಸುತ್ತಿದ್ದಾನೆ.
Kshetra Samachara
14/06/2022 06:16 pm