ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರ ಅಟ್ಟಹಾಸ ಹೆಚ್ಚಾಗಿದ್ದು,ಪೆಟ್ರೋಲ್ ಬಂಕ್ ನಲ್ಲಿ ಗಾಡಿಗೆ ಪೆಟ್ರೋಲ್ ಹಾಕಿಕೊಂಡ ಪುಂಡರು ದಾಂದಲೇ ಮಾಡಿದ್ದಾರೆ.
ನಗರದ ಬ್ಯಾಟರಾಯನಪುರದ ಪೆಟ್ರೋಲ್ ಬಂಕ್ ನಲ್ಲಿ ಪುಂಡಾಟ ಮೆರೆದ ಅಸಾಮಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಂಕ್ ಗೆ ನುಗ್ಗಿ ಪೆಟ್ರೋಲ್ ಹಾಕಿಕೊಂಡು ಹಣ ಕೇಳಿದ ಸಿಬ್ಬಂದಿ ಮೇಲೆ ಪುಂಡರು ಮಚ್ಚು ಬೀಸಿದ್ದಾರೆ.
ಸದ್ಯ ಮಚ್ಚು ಬೀಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಚ್ಚು ಬೀಸಿದ ಪುಂಡರನ್ನ ಬ್ಯಾಟರಾಯನಪುರ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪೆಟ್ರೋಲ್ ಬಂಕ್ ನುಗ್ಗಿದ ಮೂವರು ಪುಂಡರ ಪೈಕಿ ಇಬ್ಬರನ್ನ ಬಂಧಿಸಿದ್ದಾರೆ. ಉದಯ್ ಮತ್ತು ಕಿರಣ್ ಎಂಬುವವರ ಬಂಧನವಾಗಿದ್ದು,ಇನ್ನೊಬ್ಬ ಆಸಾಮಿಗಾಗಿ ಪೊಲೀಸ್ರು ಬಲೆ ಬೀಸಿದ್ದಾರೆ.
PublicNext
12/06/2022 03:25 pm