ಬೆಂಗಳೂರು : ಮಾದಕ ವಸ್ತುಗಳನ್ನ ಮಾರಾಟ ಮಾಡ್ತಿದ್ದ ಮೂವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ಶೇಖ್ ಸಲ್ಮಾನ್, ಶಫೀಕ್ ಹಾಗೂ ಸಲ್ಮಾನ್ ಫರೀಸ್ ಎಂದು ಗುರುತಿಸಲಾಗಿದೆ.
ಬಂಧಿತರ ಪೈಕಿ ಓರ್ವ ಆರೋಪಿ ರೌಡಿಶೀಟರ್ ಆಗಿದ್ದು, ಮೂವರೂ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಕೇರಳದಿಂದ ಎಂಡಿಎಂಎ ಮತ್ತು ಗಾಂಜಾವನ್ನ ಕಡಿಮೆ ಬೆಲೆಗೆ ಖರೀದಿಸಿ ತಂದು ನಗರಲ್ಲಿ ಮಾರಾಟ ಮಾಡುತ್ತಿದ್ದರು.
ವಿದ್ಯಾರಣ್ಯಪುರ ವ್ಯಾಪ್ತಿಯಕಲೇಜು ಮತ್ತು ಯುವ ಪೀಳಿಗೆ ಮಾರಾಟ ಮಾಡ್ತಿದ್ದ ಆರೋಪಿಗಳನ್ನ ಖಚಿತ ಮಾಹಿತಿ ಆಧರಿಸಿ ಸಿಸಿಬಿಯ ಮಾದಕ ನಿಗ್ರಹ ದಳ ಆರೋಪಿಗಳನ್ನ ಬಂಧಿಸಿದ್ದು 10 ಲಕ್ಷ ಬೆಲೆಬಾಳುವ 11 ಗ್ರಾಂ ಎಂಡಿಎಂಎ, 6 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ್ದ 1 ಕಾರು, 3 ಮೊಬೈಲ್, ಹಾಗೂ ಎಲೆಕ್ಟ್ರಾನಿಕ್ ತೂಕದ ಯಂತ್ರ ವಶಕ್ಕೆ ಪಡೆದಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/06/2022 06:42 pm