ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಲ್ಯಾಪ್‌ಟಾಪ್ ಮಾರುವುದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ಆಸಾಮಿ ಬಂಧನ!

ಯಲಹಂಕ: OLXನಲ್ಲಿ ಲ್ಯಾಪ್‌ಟಾಪ್ ಮಾರುವುದಾಗಿ‌ ನಂಬಿಸಿ ಜನರಿಗೆ ಮೋಸ ಮಾಡಿ ವಂಚಿಸುತ್ತಿದ್ದ ಆಸಾಮಿಯನ್ನ ಯಲಹಂಕದ CEN ಪೊಲೀಸರು ಬಂಧಿಸಿದ್ದಾರೆ. ಉತ್ತರ ಭಾತರದ ಕಡೆಯ ಅಮನ್ ಕುಮಾರ್(26) ನನ್ನು ದೆಹಲಿಯಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.

ಈತನ OLX ನಲ್ಲಿ ಲ್ಯಾಪ್‌ಟಾಪ್ ಮಾರಾಟಕ್ಕಿದೆ ಎಂಬ ಜಾಹೀರಾತು‌ ನೋಡಿದ ಕಸ್ಟಮರ್ MaxLap ಬೇಕು ಎಂದು ಈತನಿಗೆ ಮೊಬೈಲ್ ಮೂಲಕ ಮಾತನಾಡಿದ್ದ. ಮ್ಯಾಕ್ಸ್ ಲ್ಯಾಪ್‌ಟಾಪ್ ಸುಮಾರು 1.50.000 ಬೆಲೆ ಎಂದು ತಿಳಿಸಿ, ವಿದೇಶಗಳಿಂದ ಪಾರ್ಸಲ್ ತರಸಿಕೊಳ್ಳುವುದು ಎಂದು‌ ನಂಬಿಸುತ್ತಿದ್ದ. ಶಿಪ್ಪಿಂಗ್ ಚಾರ್ಜ್ & ಪಾರ್ಸಲ್ ಚಾರ್ಜ್ ಎಂದು 72000 ಹಣವನ್ನು ಹಾಕಿಸಿಕೊಂಡು ಲ್ಯಾಪ್‌ಟಾಪ್ ಪಾರ್ಸಲ್ ಕಳುಹಿಸಲಾಗಿತ್ತು.

ಪಾರ್ಸಲ್ ನೋಡಿದರೆ ಖಾಲಿಯಾಗಿದ್ದ ಬಾಕ್ಸ್ ಕಂಡು ಮೋಸ ಹೋದ ಗ್ರಾಹಕ ಯಲಹಂಕ CEN ಪೊಲೀಸ್ ಠಾಣೆಗೆ ದೂರು ನೀಡಿದ್ದ. ದೂರನನ್ವಯ OLX ವಂಚಕನ ಜಾಡು ಹಿಡಿದ ಪೊಲೀಸರು, ಆರೋಪಿಯನ್ನ ದೆಹಲಿಗೆ ಹೋಗಿ ಬಂಧಿಸಿ ಕರೆತಂದಿದ್ದಾರೆ. ಈತ ಬೆಂಗಳೂರು ಸೇರಿದಂತೆ ದೇಶದ ಅನೇಕ‌ ಕಡೆ ತನ್ನ ವಂಚನೆ ಜಾಲಬೀಸಿದ್ದ. ಇದೀಗ ಬೆಂಗಳೂರಿನ ಯಲಹಂಕ CEN ಪೊಲೀಸರು ಈತನನ್ನು ವಶಕ್ಕೆ ಪಡೆದು ವಿವಿಧ ಪ್ರಕರಣಗಳಲ್ಲಿ ಈತನ ಪಾತ್ರವನ್ನು ಪತ್ತೆಹಚ್ಚಿದ್ದಾರೆ. ಸದ್ಯ ಓಎಲ್ ಎಕ್ಸ್ ವಂಚಕ ಅಮನ್ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.

Edited By :
Kshetra Samachara

Kshetra Samachara

11/06/2022 05:58 pm

Cinque Terre

1.43 K

Cinque Terre

0

ಸಂಬಂಧಿತ ಸುದ್ದಿ