ನೆಲಮಂಗಲ: ಆ ದಂಪತಿಗಳು ಕಳೆದ 6-7 ವರ್ಷಗಳಿಂದ ಸ್ವಂತ ಮನೆ ಕಟ್ಕೊಂಡು, ಸಮೀಪದಲ್ಲೇ ಫ್ಯಾಕ್ಟರಿ ನಡೆಸುತ್ತಾ ಸ್ಥಳೀಯ ಜನರ ನಂಬಿಕೆ ಗಿಟ್ಟಿಸಿಕೊಂಡಿದ್ರು. ನಂಬಿಕೆಯನ್ನೇ ಬಂಡವಾಳ ಮಾಡ್ಕೊಂಡು ಚೀಟಿ ಹೆಸ್ರಲ್ಲಿ ಅವರ ಸಂಬಂಧಿಕರು, ಅಕ್ಕಪಕ್ಕದ ಮನೆಯವರ ಬಳಿ ಹಣ ಹೂಡಿಕೆ ಮಾಡಿಸಿಕೊಂಡು ರಾತ್ರೋರಾತ್ರಿ ಮನೆ ಖಾಲಿ ಮಾಡ್ಕೊಂಡು ಪರಾರಿಯಾದ ಘಟನೆ ಬೆಂಗಳೂರು ಹೆಸರಘಟ್ಟ ರಸ್ತೆಯ ಮಲ್ಲಸಂದ್ರದಲ್ಲಿ ನಡೆದಿದೆ.
ಈ ಫೋಟೋದಲ್ಲಿ ಕಾಣ್ತಿರೋ ಈ ದಂಪತಿಗಳೇ ಚೀಟಿ ಹೆಸ್ರಲ್ಲಿ ನಂಬಿದವರಿಗೆ ಉಂಡೆನಾಮ ಹಾಕಿ ಪರಾರಿಯಾದವ್ರು. ನಾರಾಯಣಪ್ಪ ಹೆಸರಿನ ಈತ ಕಳೆದ ಆರೇಳು ವರ್ಷಗಳ ಹಿಂದೆ ಮಲ್ಲಸಂದ್ರದಲ್ಲಿ ಮನೆ ಖರೀದಿ ಮಾಡಿ ಕಾರ್ಖಾನೆಯನ್ನು ಸಹ ಇಟ್ಟುಕೊಂಡಿದ್ದ. ಸುತ್ತಮುತ್ತಲಿನ ಜನರ ನಂಬಿಕೆ ಗಳಿಸಿ ಕೊನೆಗೆ ಇಂತ ಮೋಸ ಮಾಡಿದ್ದಾರೆ.
ಇಷ್ಟೇ ಅಲ್ಲ ತಾವು ವಾಸವಿದ್ದ ಮನೆಯ ಮೇಲೂ ಬ್ಯಾಂಕ್‌ನಲ್ಲಿ ಲೋನ್ ಪಡೆದುಕೊಂಡಿದ್ದಾರೆ. ಅಲ್ಲದೆ ತಮ್ಮ ಮನೆಯಲ್ಲಿ ಬಾಡಿಗೆ ಇದ್ದವರ ಬಳಿಯೂ ಸುಮಾರು 20 ಲಕ್ಷ ಹಣ ಲಪಟಾಯಿಸಿದ್ದಾರೆ. ಸುಮಾರು 70 ಜನರ ಬಳಿ 6 ಕೋಟಿಗೂ ಹೆಚ್ಚು ಚೀಟಿ ಹಣ ಲಪಟಾಯಿಸಿದ್ದು, ಮತ್ತಷ್ಟು ಜನ್ರು ಚೀಟಿ ಹಾಕಿರುವ ನುಮಾನ ಇದೆ. ಸರಾಸರಿ 15 ಕೋಟಿಗೂ ಹೆಚ್ಚು ಹಣ ಮೋಸ ಆಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಹಣ ಕಳೆದುಕೊಂಡವರು ಒಗ್ಗೂಡಿ ಬಾಗಲಗುಂಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಣ ಲಪಟಾಯಿಸಿ ಪರಾರಿಯಾದ ದಂಪತಿಗಳನ್ನ ಪೊಲೀಸರು ಹುಡುಕಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕಿದೆ.
PublicNext
09/06/2022 06:50 pm