ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕದಲ್ಲಿ ನಕಲಿ ಸೈಟ್ ಮಾರಾಟ ಜಾಲವನ್ನು ಖೆಡ್ಡಾಗೆ ಕೆಡವಿದ ಖಾಕಿ

ಬೆಂಗಳೂರು : ಯಲಹಂಕ ಸುತ್ತಮುತ್ತ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಮಾರಾಟಗಾರರು ಅಮಾಯಕರಿಗೆ ಸೈಟ್ ಗಳನ್ನು ಮಾರಾಟ ಮಾಡುತ್ತಿದ್ದರು.

ಈ ಕೃತ್ಯದಲ್ಲಿ ಮೋಸ ಹೋಗಿದ್ದ ಅಮಾಯಕ ಕಾರ್ತಿಕ್ ಎಂಬಾತ ದೂರು ನೀಡಿದ್ದ. ಪ್ರಕರಣ ಬೆನ್ನತ್ತಿದ್ದ ವಿದ್ಯಾರಣ್ಯಪುರ ಪೊಲೀಸರು 5 ಜನ ಖತರ್ನಾಕ್ ಖದೀಮರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ಫೋಟೋಗಳಲ್ಲಿ ಕಾಣ್ತಿರುವ ಈ ಐದು ಜನ ಖದೀಮರನ್ನು ಒಮ್ಮೆ ಚನ್ನಾಗಿ ನೋಡ್ಕೊಂಡ್ಬಿಡಿ. ಯಲಹಂಕ ತಾಲೂಕಿನ ಚಿಕ್ಕಬೆಟ್ಟಹಳ್ಳಿಯ ಸರ್ವೆ ನಂಬರ್ 27/1ರಲ್ಲಿನ ಶ್ರೀಸಾಯಿ ಲೇಔಟ್ ಸೈಟ್ ನಂಬರ್ 56 ನ್ನು 2015ರಲ್ಲಿ ಶ್ರೀಮತಿ ಎನ್.ಗಿರಿ & ಶ್ರೀಮತಿ ಗಿರಿ ರವರು ಕಾರ್ತಿಕ್ ಎಂಬುವವರಿಗೆ ಕ್ರಯ ಮಾಡಿಸಿಕೊಟ್ಟಿದ್ದರು.

ಆದರೆ ರಿಜಿಸ್ಟರ್ ಮಾಡಿಸಿಕೊಟ್ಟ ನಿವೇಶನವೇ ನಕಲಿ ಎಂದು ಗೊತ್ತಾಗಿ ಕಾರ್ತಿಕ್ ಬಾಮೈದ ರಂಜಿತ್ ದೂರು ದಾಖಲಿಸಿದ್ದರು. ದೂರಿನನ್ವಯ ವಿದ್ಯಾರಣ್ಯಪುರ ಪೊಲೀಸರು ತನಿಖೆ ಕೈಗೊಂಡಾಗ ನಕಲಿ ಆಸಾಮಿಗಾಳಾದ 1)ರೇಣುಗೋಪಾಲ- ನಕಲಿ-ವೇಣುಗೋಪಾಲ್, 2) ಗೌರಮ್ಮ-ನಕಲಿ -ಜಯಲಕ್ಷ್ಮಿ,3)ಶಂಕರ್- ನಕಲಿ ನಾಗರಾಜ್, 4)ಪ್ರಕಾಶ್ & 5)ಶಾಂತರಾಜು ರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ಆಸಾಮಿಗಳು ಮೊದಲು ಕೆಂಗೇರಿ ವ್ಯಾಪ್ತಿಯಲ್ಲಿ ಜನರನ್ನು ವಂಚಿಸಿತ್ತು ಎನ್ನುತ್ತಾರೆ ಪೊಲೀಸರು.

ಎಲ್ಲಿ ಮೋಸ ಹೋಗುವ ಜನರು ಇರ್ತಾರೋ ಅಲ್ಲಿ ಮೋಸ ಮಾಡೋರು ಇದ್ದೆ ಇರ್ತಾರೆ. ಆದ್ದರಿಂದ ಬೆಂಗಳೂರಿನ ಜನ ನಿಮ್ಮ ನಿಮ್ಮ ಖಾಲಿ ನಿವೇಶನಗಳನ್ನು ಭದ್ರಪಡಿಸಿಕೊಳ್ಳಿ. ಇಲ್ಲವಾದರೆ ಯಾರು ಗೊತ್ತಿಲ್ಲದವರು ನಿಮ್ಮ ನಿವೇಶನದ ಮಾಲೀಕರಾಗಿಬಿಡ್ತಾರೆ..

Edited By : Manjunath H D
PublicNext

PublicNext

08/06/2022 07:19 pm

Cinque Terre

32.76 K

Cinque Terre

1

ಸಂಬಂಧಿತ ಸುದ್ದಿ