ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಡುರಸ್ತೆಯಲ್ಲಿ ಲಾಂಗ್ ಹಿಡಿದು ಪುಂಡರ ಓಡಾಟ; ಸಾರ್ವನಿಕರಿಂದ ಸಖತ್‌ ʼಪಾಠʼ

ಬೆಂಗಳೂರು: ಹಾಡಹಗಲೇ ನಡುರಸ್ತೆಯಲ್ಲಿ ಲಾಂಗ್ ಹಿಡಿದು ಉಪಟಳ ಕೊಡ್ತಿದ್ದ ಪುಂಡರನ್ನು ಸಾರ್ವಜನಿಕರೇ ಹಿಡಿದು ಪೊಲೀಸ್ರಿಗೆ ಒಪ್ಪಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಇಂದು ಬೈಕ್ ನಲ್ಲಿ ಬಂದಿದ್ದ ಮೂವರು ಪುಂಡರಲ್ಲಿ ಒಬ್ಬ ಲಾಂಗ್ ಹಿಡಿದು ಭಯ ಹುಟ್ಟಿಸುವ ರೀತಿ ಓಡಾಡ್ತಿದ್ದ.

ಈ ವೇಳೆ ಸಾರ್ವಜನಿಕರು ಬೈಕ್ ನಲ್ಲಿ ಚೇಸ್ ಮಾಡಿ ಲಾಂಗ್ ತಿರುಗಿಸುತ್ತಿದ್ದ ಯುವರಾಜ್ ಎಂಬಾತನನ್ನು ಹಿಡಿದು, ಹೆಡೆಮುರಿ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ‌. ಮುನಿಕೃಷ್ಣ ಎಂಬವರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದ ಪುಡಿ ರೌಡಿಗಳು ಹಲ್ಲೆ ನಡೆಸಿ ಎಸ್ಕೇಪ್ ಆಗ್ತಿದ್ರು.

ಈ ವೇಳೆ ಸಾರ್ವಜನಿಕರು ಗಮನಿಸಿ ಕಾರ್ಯಾಚರಣೆ ನಡೆಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Edited By : Manjunath H D
PublicNext

PublicNext

07/06/2022 05:31 pm

Cinque Terre

27.94 K

Cinque Terre

0

ಸಂಬಂಧಿತ ಸುದ್ದಿ