ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಮಾಡೇಶ್ವರ ಗ್ರಾಮ ಸಮೀಪದ ಹುಲುಕುಡಿಬೆಟ್ಟದ ಮೇಲಿನ ಕಲ್ಯಾಣಿಯಲ್ಲಿ ಭಕ್ತರೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಧುಗಿರಿ ತಾಲೂಕಿನ ಕೊಂಡಲಾಪುರದ ನಿವಾಸಿ ತಿಪ್ಪೇಸ್ವಾಮಿ (38) ಮೃತರು. ಭಾನುವಾರ ಹುಲುಕುಡಿ ಬೆಟ್ಟದ ಮೇಲಿನ ವೀರಭದ್ರಸ್ವಾಮಿ ದೇವಸ್ಥಾನದ ದರ್ಶನಕ್ಕೆ ಬಂದಿದ್ದ ತಿಪ್ಪೇಸ್ವಾಮಿ ಅವರು, ಕಲ್ಯಾಣಿಯಲ್ಲಿ ಸ್ನಾನ ಮಾಡಲು ಹೋದಾಗ ಕಾಲು ಜಾರಿ ಬಿದ್ದು ಈ ದುರ್ಘಟನೆ ನಡೆದಿದೆ.ತಾಲೂಕಿನ ಪುಣ್ಯಕ್ಷೇತ್ರವಾಗಿರುವ ಹುಲುಕುಡಿ ಬೆಟ್ಟದ ವೀರಭದ್ರ ಸ್ವಾಮಿ ದೇವಾಲಯದ ಮೇಲಿಂದ ಮೃತದೇಹವನ್ನು ಕೆಳಗಿಳಿಸಿ, ವಾರಸುದಾರರಿಗೆ ಒಪ್ಪಿಸಲಾಯಿತು.
Kshetra Samachara
07/06/2022 08:53 am