ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒಂದೇ ದಿನ 6 ಬೀದಿ ನಾಯಿಗಳ ದುರ್ಮರಣ : ವಿಕೃತ ಮನಸ್ಸಿನ ವ್ಯಕ್ತಿಯಿಂದ ಕೃತ್ಯ ಶಂಕೆ..!

ಬೆಂಗಳೂರು ದಕ್ಷಿಣ: ಮಾತು ಬಾರದ ಮೂಕ ಪ್ರಾಣಿಗಳಿಗೆ ಯಾರೋ ದುಷ್ಕರ್ಮಿಗಳು ವಿಷವಿಟ್ಟ ಪರಿಣಾಮ ಒಂದೇ ದಿನ ಆರು ಬೀದಿನಾಯಿಗಳು ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮದಲ್ಲಿ ನಡೆದಿದೆ.

ಇನ್ನು ಹೆನ್ನಾಗರ ಗ್ರಾಮದ ನಿವಾಸಿ ಗೋವಿಂದ್ ಮೌರ್ಯ ಎಂಬವರ ಮನೆಯಲ್ಲಿದ್ದ ಲಾಬ್ ಜಾತಿಗೆ ಸೇರಿದ ನಾಯಿ ಕೂಡ ಸಾವನ್ನಪ್ಪಿದೆ.

ಕಳೆದ ರಾತ್ರಿ 12:30 ರ ಸುಮಾರಿಗೆ ವ್ಯಕ್ತಿಯೊಬ್ಬ ಕಾಂಪೌಂಡ್ ಬಳಿ ಬಂದಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಕುಟುಂಬಸ್ಥರು ಕಳ್ಳತನಕ್ಕೆ ಬಂದಿರುವ ವ್ಯಕ್ತಿಯ ಕೃತ್ಯ ಇದಾಗಿರಬಹುದುದೆಂದು ಶಂಕಿಸಲಾಗಿದೆ. ಅಲ್ಲದೆ ವಿಕೃತ ಮನಸ್ಸಿನ ವ್ಯಕ್ತಿ ಇತರ ಮಾಡಿರಬಹುದೆನ್ನುವ ಅನುಮಾನ ವ್ಯಕ್ತವಾಗಿದೆ.

ಸದ್ಯ ಕೆಲ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು ಪೊಲೀಸ ತನಿಖೆ ಬಳಿಕ ನಿಜಾಂಶ ಹೊರಬಿಳಲಿದೆ.

Edited By :
Kshetra Samachara

Kshetra Samachara

06/06/2022 08:40 pm

Cinque Terre

3.22 K

Cinque Terre

0

ಸಂಬಂಧಿತ ಸುದ್ದಿ