ದೊಡ್ಡಬಳ್ಳಾಪುರ: ಸ್ನೇಹಿತರ ಬಳಿ ಚೀಟಿ ಹಾಕಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ಳು ಹೆಂಡತಿ. ಹೆಂಡತಿಯ ಸಾಲವನ್ನ ತೀರಿಸಿದ ಗಂಡ ನಿತ್ಯ ಬೈಯುತ್ತಿದ್ದ. ಗಂಡನ ಬೈಗುಳಕ್ಕೆ ಬೇಸತ್ತ ಹೆಂಡತಿ ಗಂಡನ ಕೊಲೆಗೆ ಸುಪಾರಿ ಕೊಟ್ಟಿದ್ಳು. ಕೊಲೆಯತ್ನ ಪ್ರಕರಣ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಪೊಲೀಸರು 4 ಆರೋಪಿಗಳನ್ನ ಬಂಧಿಸಿದ್ದಾರೆ.
ಬೆಂಗಳೂರಿನ ಟಿ.ದಾಸರಹಳ್ಳಿಯ ಭುವನೇಶ್ವರ ನಗರದ ನಿವಾಸಿ 44 ವರ್ಷದ ಮಮತಾ ಗಂಡನ ಕೊಲೆಗೆ ಸುಪಾರಿ ಕೊಟ್ಟಾಕೆ. ಈಕೆ ಪಕ್ಕದ್ಮನೆಯವರ ಬಳಿ ಚೀಟಿ ಹಾಕಿದ್ದಲ್ಲದೆ ತನ್ನ ಸ್ನೇಹಿತರನ್ನು ಕರೆದು ಚೀಟಿ ಹಾಕಿಸಿದ್ಳು. ಚೀಟಿ ನಡೆಸುತ್ತಿದ್ದ ಪಕ್ಕದ್ಮನೆಯವಳು ಚೀಟಿ ಹಣದೊಂದಿಗೆ ಪರಾರಿಯಾಗಿದ್ಳು. ಕೊನೆಗೆ ಸ್ನೇಹಿತರು ಚೀಟಿ ಹಣ ಕೇಳೋಕೆ ಶುರು ಮಾಡಿದ್ರು. ಆಗ ಮಮತಾಳನ್ನು ಪಾರು ಮಾಡಲು ಗಂಡ ಮುಕುಂದ 25 ಲಕ್ಷ ಹಣ ಕೊಟ್ಟಿದ್ದ. ಆಮೇಲೆ ನಿತ್ಯ ಬೈಯೋಕೆ ಶುರು ಮಾಡಿದ. ಇದನ್ನೆಲ್ಲಾ ಸ್ನೇಹಿತೆ ತಸ್ಲೀಮಾ ಬಳಿ ಮಮತಾ ಹೇಳಿಕೊಂಡಿದ್ಳು. ಕೊನೆಗೆ ಇವರಿಬ್ಬರೂ ಸೇರಿ ಮುಕುಂದನನ್ನೇ ಕೊಲ್ಲುವ ಪ್ಲ್ಯಾನ್ ಮಾಡಿ ಸುಪಾರಿ ಕೂಡಾ ಕೊಟ್ಟ್ರು.
ಡಿಡಿಪಿಐ ಕಚೇರಿಯಲ್ಲಿ FDA ಕೆಲಸ ಮಾಡುವ ಮುಕುಂದ ಸಹದ್ಯೋಗಿಗಳೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಕಾರು ಅಡ್ಡಗಟ್ಟಿ ಹಂತಕರು ಮುಕುಂದನನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ. ಅದೇ ರಸ್ತೆಯಲ್ಲಿ ಮತ್ತೊಂದು ಕಾರು ಬರುವುದನ್ನ ಕಂಡ ಹಂತಕರು ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳಾದ ಸೈಯದ್ ನಹೀಮ್, ಮೌಲಾ, ತಸ್ಲೀಮಾ ಮತ್ತು ಮಮತಾಳನ್ನ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತಿಬ್ಬರ ಪತ್ತೆಗಾಗಿ ತಲಾಶ್ ನಡೆಸುತ್ತಿದ್ದಾರೆ.
PublicNext
06/06/2022 05:45 pm