ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾಲದ ಸುಳಿ; ಉರುಳಿಗೆ ಕೊರಳೊಡ್ಡಿದ ಉರಗ ರಕ್ಷಕ

ದೊಡ್ಡಬಳ್ಳಾಪುರ: ಸಾಲದ ಸುಳಿಗೆ ಸಿಲುಕಿ ಬೇಸತ್ತ ಉರಗ ರಕ್ಷಕರೊಬ್ಬರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರ ನಗರ ಶಾಂತಿನಗರದ 7ನೇ ಕ್ರಾಸ್ ನಲ್ಲಿ ಪುನೀತ್ ರಾಮ್ (28) ಆತ್ಮಹತ್ಯೆ ಮಾಡಿಕೊಂಡವರು.

ಪುನೀತ್ ರಾಮ್ ರೆಸಾರ್ಟ್ ನಲ್ಲಿ ಸಾಹಸ ಕ್ರೀಡೆಗಳ ಆಯೋಜನೆ ಮಾಡುತ್ತಿದ್ದರು. ಹೀಗೆ ಸಾಹಸ ಕ್ರೀಡೆಗಳ ಆಯೋಜನೆಗಾಗಿ ಬಂಡವಾಳ ಹಾಕಿದ್ದರು. ಆದರೆ, ಹಾಕಿದ ಬಂಡವಾಳ ವಾಪಸ್ ಬಾರದ ಹಿನ್ನೆಲೆಯಲ್ಲಿ ಸಾಲದ ಸುಳಿಗೆ ಸಿಲುಕಿದ್ದರು. ಸಾಲ ಬಾಧೆಯಿಂದ ನರಳುತ್ತಿದ್ಧ ಪುನೀತ್ ಇಂದು ಮನೆಯ ರೂಮ್ ನಲ್ಲಿ ನೇಣಿಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಸರ ಪ್ರೇಮಿ, ಪ್ರಾಣಿ-ಪಕ್ಷಿ ಪ್ರಿಯರಾಗಿದ್ದ ಪುನೀತ್ ರಾಮ್, ಉರಗಗಳನ್ನು ಸಂರಕ್ಷಣೆ ಮಾಡುತ್ತಿದ್ದರು. ಮನೆಗಳಿಗೆ ಸೇರಿಕೊಂಡಿದ್ದ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುತ್ತಿದ್ದರು. ಜೊತೆಗೆ ಹಿಂದೂ ಸಂಘಟನೆಗಳಲ್ಲಿಯೂ ಗುರುತಿಸಿಕೊಂಡಿದ್ದರು.

Edited By : Shivu K
PublicNext

PublicNext

03/06/2022 08:30 pm

Cinque Terre

49.11 K

Cinque Terre

1

ಸಂಬಂಧಿತ ಸುದ್ದಿ