ಬೆಂಗಳೂರು:ಕೋವಿಡ್ ಬಳಿಕ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದ್ದು, ನಗರದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗ್ತಿದೆ ಎಂದು ಸಂಚಾರ ಪೊಲೀಸ್ರ ವಿಶೇಷ ಕಾರ್ಯಾಚರಣೆಯಲ್ಲಿ ಗೊತ್ತಿಗಿದೆ.ಕೈಕಾಲು ಗಟ್ಟಿ ಇದ್ದವರೂ ಕೂಡ ಭಿಕ್ಷೆಬೇಡುತ್ತಿದ್ದು,ಭಿಕ್ಷುಕರಿಂದ ಟ್ರಾಫಿಕ್ ಜಾಂ ಕೂಡ ಹೆಚ್ಚಾಗ್ತಿದೆ ಎಂದು ಸಂಚಾರ ಪೊಲೀಸರ ಸ್ಪೆಷಲ್ ಡ್ರೈವ್ ನಲ್ಲಿ ಪತ್ತೆಯಾಗಿದೆ.
ಭಿಕ್ಷುಕರು ಕೂಡ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ.ರಸ್ತೆಯಲ್ಲಿ ಬೇಕಾಬಿಟ್ಟಿ ಓಡಾಡುವ ಭಿಕ್ಷುಕರು ,ನಿರ್ಗತಿಕರನ್ನ ಗುರುತಿಸಿ ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡುವ ಕೆಲಸವನ್ನ ಸಂಚಾರ ಪೊಲೀಸ್ರು ಮಾಡ್ತಿದ್ದಾರೆ.ಆಟೋ ರಾಜ ನಡೆಸುತ್ತಿರುವ ಹೋಪ್ ಆಫ್ ಹೋಮ್ಸ್ ಸಂಸ್ಥೆ ಗೆ ಭಿಕ್ಷುಕರನ್ನ ಕರೆ ತಂದು ಅವರ ಆರೈಕೆ ಮಾಡಲಾಗ್ತಿದೆ.ಕೇವಲ ಎರಡು ಗಂಟೆಯ ಕಾರ್ಯಾಚರಣೆಯಲ್ಲಿ 24 ಜನ ಭಿಕ್ಷುಕರನ್ನ ಪುನರ್ವಸತಿ ಕೇಂದ್ರಕ್ಕೆ ಯಲಹಂಕ ಸಂಚಾರ ಪೊಲೀಸ್ರು ಕಳುಹಿಸಿದ್ದು, ಪೊಲೀಸರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ಯವಾಗುತ್ತಿದೆ.
ಭಿಕ್ಷುಕರನ್ನ ಗುರುತಿಸಿ ಅವರ ಪೂರ್ವಾಪರ ವಿಚಾರದ ವೇಳೆ ಹ್ಯೂಮನ್ ಟ್ರಾಫಿಕಿಂಗ್ ಬಗ್ಗೆ ಕೂಡ ಪೊಲೀಸರು ಗಮನ ಹರಿಸುತ್ತಿದ್ದಾರೆ.ಮಾನವ ಕಳ್ಳಸಾಗಾಣಿಕೆ ಮಾಡಿ ಅವರಿಂದ ಭಿಕ್ಷೆ ಬೇಡಿಸಿ ಹಣ ಸಂಪಾದಿಸುವ ಜಾಲ ಕೂಡ ನಗರದಲ್ಲಿದ್ದು ಈ ಹಿಂದೆ ಕೂಡ ಚೈಲ್ಡ್ ಟ್ರಾಫಿಕಿಂಗ್ , ಹ್ಯೂಮನ್ ಟ್ರಾಫಿಕಿಂಗ್ ಜಾಲವನ್ನ ಪೊಲೀಸರು ಪತ್ತೆಮಾಡಿದ್ರು.ಈ ಹಿನ್ನೆಲೆ ಭಕ್ಷುಕರನ್ನ ಗುರುತಿಸಿ ಪುನರ್ವಸತಿ ಕಳಿಸುವ ಕಾರ್ಯಾಚರಣೆ ಜೊತೆಗೆ ಮಾನವ ಕಳ್ಳಸಾಗಾಣಿಕೆ ಬಗ್ಗೆಯೂ ಸಂಚಾರ ಪೊಲೀಸರು ಮಾಹಿತಿ ಕಲೆ ಹಾಕ್ತಿದ್ದಾರೆ.
PublicNext
03/06/2022 11:59 am