ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಲ್ ಕೇಳಿದ್ದಕ್ಕೆ‌ ಆಸ್ಪತ್ರೆ ಉಡಾಯಿಸುವುದಾಗಿ ಬೆದರಿಕೆ; ನಾಲ್ವರು ಪುಂಡರು ಅಂದರ್

ಬೆಂಗಳೂರು: ಬಿಲ್‌ ಕೇಳಿದರೆ ಆಸ್ಪತ್ರೆಯನ್ನೇ ಉಡಾಯಿಸುವುದಾಗಿ ವೈದ್ಯಕೀಯ ಸಿಬ್ಬಂದಿಯನ್ನೇ ಬೆದರಿಸಿದ್ದ ಪುಂಡರನ್ನು ಕೆಜಿ ಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ. ವೈದ್ಯರ ಅನುಮತಿಯಿಲ್ಲದೆ ಗುಣಮುಖರಾಗಿದ್ದ ರೋಗಿಯನ್ನು ಕರೆದುಕೊಂಡು ಹೋಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಾಡುಗೊಂಡನಹಳ್ಳಿ ಪೊಲೀಸರು ನಾಲ್ವರ ಹೆಡೆಮುರಿ ಕಟ್ಟಿದ್ದಾರೆ.

ಖಾಸಗಿ ಆಸ್ಪತ್ರೆ ಮಾಲೀಕರು ದೂರು ನೀಡಿದ ಮೇರೆಗೆ ವೆಂಕಟೇಶ್ ಪುರದ ನವಾಜ್, ಹುಸೇನ್, ಸೈಯ್ಯದ್ ಅಬ್ಬಾಸ್, ಸಗೀರ್ ಪಾಷ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ, ಸಯ್ಯದ್ ಶರೀಫ್ ನ ಮಗ ಆಸ್ಗರ್ ಮೇ 18ರಂದು ಕೆ.ಜಿ. ಹಳ್ಳಿ ರಫಿ ಆಸ್ಪತ್ರೆಗೆ ದಾಖಲಾಗಿದ್ದ.

ತಪಾಸಣೆ ನಡೆಸಿದ ವೈದ್ಯರು ಶ್ವಾಸಕೋಶದಲ್ಲಿ ನೀರಿನಾಂಶವಿದ್ದು ಹೊರ ತೆಗೆಯಬೇಕಾಗಿದೆ. ಇದಕ್ಕೆ ಚಿಕಿತ್ಸಾ ವೆಚ್ಚ ಹೆಚ್ಚಾಗಲಿದೆ ಎಂದು ಹೇಳಿದ್ದರು. ಸಯ್ಯದ್ ಸಮ್ಮತಿ ಮೇರೆಗೆ 15 ದಿನಗಳ ಕಾಲ ಆಸ್ಗರ್ ಗೆ ಚಿಕಿತ್ಸೆ ನೀಡಿದ ಪರಿಣಾಮ ಗುಣಮುಖನಾಗಿದ್ದ. ಚಿಕಿತ್ಸಾ ವೆಚ್ಚ 2.09 ಲಕ್ಷ ರೂ. ಆಗಿತ್ತು. ಸಯ್ಯದ್ ಮುಂಗಡವಾಗಿ 41 ಸಾವಿರ ರೂ. ಪಾವತಿಸಿ ಉಳಿದ 1.78 ಲಕ್ಷ ರೂ. ಭರಿಸಲು ನಿರಾಕರಿಸಿದ್ದ.

ಚಿಕಿತ್ಸೆ ನೀಡುವ ನೆಪದಲ್ಲಿ ಅನಗತ್ಯವಾಗಿ 2 ಲಕ್ಷ ರೂ.ಗೆ ಬಿಲ್ ಏರಿಸಿದ್ದಾರೆ.‌ ಸಣ್ಣ-ಪುಟ್ಟ ಚಿಕಿತ್ಸೆ ನೀಡಿ ಲಕ್ಷಾಂತರ ರೂಪಾಯಿ ಬಿಲ್‌ ಮಾಡಿದ್ದಾರೆ ಎಂದು ಆಸ್ಪತ್ರೆಯಲ್ಲಿ ಸಯ್ಯದ್ ಕಿರಿಕ್ ಮಾಡಿ ಆಸ್ಪತ್ರೆಯಿಂದ ಹೊರಬಂದು ಕೂಗಾಡಿದ್ದ. ಈ ವೇಳೆ ರೋಗಿ ಅಳಿಯ ನವಾಜ್, ಸಂಬಂಧಿಕ ಸಗೀರ್ ಪಾಷಾ ಕೈ ಜೋಡಿಸಿದ್ದರು. ಅದೇ ದಿನ ರಾತ್ರಿ ಒಟ್ಟು ಬಂಧಿತರು ಸೇರಿ 8 ಜನರು ಅತಿಕ್ರಮವಾಗಿ ಆಸ್ಪತ್ರೆಗೆ ನುಗ್ಗಿ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಬೆದರಿಸಿದ್ದಾರೆ.

ವೈದ್ಯರ ಅನುಮತಿಯಿಲ್ಲದೆ ಸ್ವಯಂಪ್ರೇರಿತವಾಗಿ ಡಿಸ್ ಚಾರ್ಜ್‌ ಮಾಡಿಕೊಂಡಿದ್ದಾರೆ‌. ಸಿಬ್ಬಂದಿ ಪ್ರಶ್ನಿಸಿದ್ದಕ್ಕೆ, ಬಿಲ್ ಕೇಳಿದರೆ ಆಸ್ಪತ್ರೆಯನ್ನೇ ಉಡಾಯಿಸುತ್ತೇವೆ ಎಂದು ಹೆದರಿಸಿ ತಡೆಯಲು ಬಂದ ಸೆಕ್ಯೂರಿಟಿ ಗಾರ್ಡ್ ಮೇಲೆ‌ ಕೈ ಮಾಡಿ ರೋಗಿಯನ್ನು ಕರೆದುಕೊಂಡು ಎಸ್ಕೇಪ್ ಆಗಿದ್ದಾರೆ. ಕೇಸ್‌ ದಾಖಲಿಸಿದ ಇನ್‌ ಸ್ಪೆಕ್ಟರ್ ರೋಹಿತ್ ನೇತೃತ್ವದ ತಂಡ ಆಸ್ಪತ್ರೆಯ ಸಿಸಿ ಟಿವಿ ಆಧರಿಸಿ ನಾಲ್ವರನ್ನು ಬಂಧಿಸಿದ್ದಾರೆ.‌ ಕೃತ್ಯದಲ್ಲಿ ಇನ್ನೂ 4 ಮಂದಿ ಭಾಗಿಯಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

02/06/2022 11:14 pm

Cinque Terre

1.91 K

Cinque Terre

0

ಸಂಬಂಧಿತ ಸುದ್ದಿ