ಬೆಂಗಳೂರು: ಸಖತ್ ಟೆಕ್ನಿಕ್ ಬಳಸಿ ಕಳ್ಳತನ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೊದಲು ಬೈಕ್ ನಂತರ ಮೊಬೈಲ್. ಎರಡನ್ನೂ ತನ್ನ ಬಳಿ ಇಟ್ಟುಕೊಳ್ಳದೇ ಕಳೆದುಕೊಂಡ ಮಾಲೀಕರಿಗೆ ಮೀಟ್ ಮಾಡಿಸುತ್ತಿದ್ದ ಕಳ್ಳನ ಕರಾಮತ್ತನ್ನ ಬ್ಯಾಡರಹಳ್ಳಿ ಪೊಲೀಸರು ಪತ್ತೆ ಮಾಡಿದ್ದಾರೆ.
ಪ್ರದೀಪ್ ಎಂಬಾತ ಬಂಧಿತ ಆರೋಪಿ. ಮೊದಲು ಆನ್ಲೈನ್‌ನಲ್ಲಿ ಬೈಕ್ ಸೇಲ್ ಮಾಡೋರನ್ನ ಸರ್ಚ್ ಮಾಡ್ತಿದ್ದ ಪ್ರದೀಪ್, ಬೈಕ್ ಮಾಲೀಕರಿಗೆ ನಾನು ಖರೀದಿ ಮಾಡ್ತೀನಿ ಅಂತಾ ಆನ್ಲೈನ್ ಮೂಲಕ ಕಾಂಟ್ಯಾಕ್ಟ್ ಮಾಡ್ತಿದ್ದ. ಬೈಕ್ ಇರೋ ಜಾಗಕ್ಕೆ ಹೋಗಿ ಟೆಸ್ಟ್ ಡ್ರೈವ್ ಮಾಡ್ತೀನಿ ಅಂತ ಬೈಕ್ ಸಮೇತ ಎಸ್ಕೇಪ್ ಆಗ್ತಿದ್ದ. ನಂತರ ಆನ್ಲೈನ್‌ನಲ್ಲೇ ಹೈಫೈ ಮೊಬೈಲ್ ಸೇಲ್ ಮಾಡೋರನ್ನ ಟಾರ್ಗೆಟ್ ಮಾಡ್ತಿದ್ದ. ಐಫೋನ್, ಒನ್ ಪ್ಲಸ್ ಸೇರಿದಂತೆ 40 ಸಾವಿರಕ್ಕೂ ಹೆಚ್ಚು ಮೌಲ್ಯದ ಮೊಬೈಲ್‌ಗಳನ್ನೇ ಆರೋಪಿ ಟಾರ್ಗೆಟ್ ಮಾಡ್ತಿದ್ದ . ಯಾವುದೋ ಒಂದು ಅಡ್ರೆಸ್ ಕೊಟ್ಟು ಅಲ್ಲಿಗೆ ಕರೆಸಿ ಮೊಬೈಲ್ ಖರೀದಿ ಮಾಡ್ತಿದ್ದ. ದುಡ್ಡಿಲ್ಲ ಹತ್ತು ನಿಮಿಷ ಬರ್ತೀನಿ ಅಂತ ಎಸ್ಕೇಪ್ ಆಗುತ್ತಿದ್ದ ಆರೋಪಿ ಹಣ ತಗೊಂಡು ಬರ್ತಿನಿ ಎಂದು ಹೇಳಿ ಕದ್ದ ಬೈಕ್ ನ್ನು ಕೊಟ್ಟು ಎಸ್ಕೇಪ್ ಆಗ್ತಿದ್ದ. ಬೈಕ್ ಕೊಟ್ಟ ಅಂತಾ ಕಂಪ್ಲೆಂಟ್ ಕೊಡದೆ ಮೊಬೈಲ್ ಮಾಲೀಕರು ಸುಮ್ಮನಾಗ್ತಿದ್ರು. ಇದೇ ಟೈಂಗೆ ಇತ್ತ ಬೈಕ್ ಮಾಲೀಕರಿಗೆ ಕರೆ ಮಾಡಿ ನಿಮ್ಮ ಬೈಕ್ ಇವರ ಬಳಿ ಇದೆ ಎಂದು ಮೊಬೈಲ್ ಮಾಲೀಕರ ನಂಬರ್ ಕೊಟ್ಟು ಎಸ್ಕೇಪ್ ಆಗ್ತಿದ್ದ. ಬೈಕ್ ಮಾಲೀಕರು ಮೊಬೈಲ್ ಮಾಲಿಕರಿಗೆ ಒಂದಷ್ಟು ಹಣ ಕೊಟ್ಟು ಬೈಕ್ ಮಾಲೀಕರು ಬೈಕ್ ಬಿಡಿಸಿಕೊಳ್ತಿದ್ದರು. ಈ ಮಧ್ಯೆ ಮೊಬೈಲ್ ಬೇರೆಡೆ ಮಾರಿ ಬಂದಿದ್ದ ಹಣದಿಂದ ಈತ ಮಜಾ ಮಾಡ್ತಿದ್ದ.
ಇತ್ತೀಚೆಗೆ ಬೈಕ್ ಮಾಲೀಕರಿಂದ ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
Kshetra Samachara
02/06/2022 03:42 pm