ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕ್ರೆಡಿಟ್ ಕಾರ್ಡ್ ರಿಕವರಿ ಕಾಟ ತಾಳಲಾರದೆ ಪೊಲೀಸ್ ಠಾಣೆಗೆ ಹೋದ ಸಹನಟ

ಬೆಂಗಳೂರು:ಇತ್ತೀಚೆಗೆ ಕ್ರೆಡಿಟ್ ಕಾರ್ಡ್ ರಿಕವರಿ ಮನ್ ಗಳ ಹಾವಳಿ ಜಾಸ್ತಿಯಾಗಿರೋ ಕುರಿತು ಸಾಕಷ್ಟು ದೂರುಗಳು ಕೇಳಿ ಬಂದಿದ್ವು.ಇದೀಗ ಸಹನಟನಿಗೆ ಕೂಡ ಕ್ರೆಡಿಟ್ ಕಾರ್ಡ್ ರಿಕವರಿ ಮೆನ್ ಕಿರುಕುಳ ನೀಡಿದ್ದು.ಇದೀಗ ಸಹನಟ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾನೆ.

ಚಿತ್ರ ನಟ ಶುಭಂ ಶರ್ಮ ಹಲವು‌ ಸಿನೆಮಾ ಹಾಗೂ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದು,ಹಲವು ವರ್ಷಗಳಿಂದ ಕೋಟಕ್ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ರು. ಹಲವಾರು ಭಾರಿ ವಹಿವಾಟು ನಡೆಸುತ್ತಿದ್ರು ಜೊತೆಗೆ ಸರಿಯಾದ ಟೈಮ್ ನಲ್ಲಿ ಹಣವನ್ನು ಪಾವತಿ ಕೂಡ ಮಾಡಿದ್ರು.ಅದರೆ ಕರೋನಾ ಸಂದರ್ಭದಲ್ಲಿ ಫಿಲ್ಮ್ ಇಂಡಸ್ಟ್ರಿ ಕೂಡ ಸಂಪೂರ್ಣ ಬಂದ್ ಆಗಿತ್ತು ಯಾವುದೇ ಕೆಲಸ ಕಾರ್ಯ ಇರಲಿಲ್ಲ.ಜೀವನ ನಿರ್ವಹಣೆ ಗಾಗಿ ಶುಭಂ ಶರ್ಮಾ ಎರಡು ಲಕ್ಷ ಹಣವನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಡೆದಿದ್ರು.ಅದರೆ ಸರಿಯಾಗಿ ಕೆಲಸವಿಲ್ಲದೆ ಕ್ರೆಡಿಟ್ ಕಾರ್ಡ್ ಹಣವನ್ನು ಪಾವತಿ ಮಾಡಲು ಸಾಧ್ಯವಾಗಲಿಲ್ಲ.ಪದೇ ಪದೇ ಬ್ಯಾಂಕ್ ನಿಂದ ಹಣ ಕಟ್ಟುವಂತೆ ಕಾಲ್ ಬರತ್ತಿತ್ತು.ನಂತರ ಶುಭಂ ಶರ್ಮಾ ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಯಾಗಿ ಹಣ ಕಟ್ಟಲು ಸ್ವಲ್ಪ ಕಾಲಾವಕಾಶ ಕೇಳಿದ್ರು.ಇದಕ್ಮೆ ಬ್ಯಾಂಕ್ ಅಧಿಕಾರಿಗಳು ಒಪ್ಪಿಗೆಯನ್ನು ಕೂಡ ಸೂಚಿಸಿದ್ರು.ಅದರೆ ಕ್ರೆಡಿಟ್ ಕಾರ್ಡ್ ರಿಕವರಿ ಸಿಬ್ಬಂದಿ ಕಿರಣ್ ಹಿಲ್ಲೂರ್ ಎಂಬಾತ ಪದೇ ಪದೇ ಮನೆಗೆ ಬಂದು ಪೂರ್ತಿ ಹಣ ನೀಡುವಂತೆ ಕಿರುಕುಳ ಮಾಡ್ತಿದ್ನಂತೆ .ಹೀಗಾಗಿ ಆರ್ ಬಿ ಐ ದೂರು ಪ್ರಾಧಿಕಾರಕ್ಕೆ ದೂರು ನೀಡಿದ್ದ ಶುಭಂ.

ಪ್ರಾಧಿಕಾರ, ಕಸ್ಟಮರ್ ಮನೆಗೆ ಹೋಗಿ ತೊಂದರೆ ಕೊಡಬಾರದು.ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನ ಮಾಡಿ‌ ಎಂದು ನೊಟೀಸ್ ನೀಡಿತ್ತು.ನೊಟೀಸ್ ಗೂ ಲೆಕ್ಕಿಸದೆ ಮತ್ತೆ ಮನೆಗೆ ಹೋಗಿ ಪ್ರಾಣ ಬೆದರಿಕೆ ಹಾಕಿದ್ದನಂತೆ ಕಿರಣ್ ಹಿಲ್ಲೂರ್.ಶುಭಂನ ಸುಬ್ರಹ್ಮಣ್ಯ ನಗರದಲ್ಲಿರುವ ಅಪಾರ್ಟ್ಮೆಂಟ್ ಗೆ..ಶುಭಂ ಇಲ್ಲದ ವೇಳೆ ಮನೆಗೆ ನುಗ್ಗಿ ತಾಯಿ, ಅತ್ತಿಗೆಗೆ ಅವಾಚ್ಯ ಶಭ್ಧಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದನಂತೆ.ಅಷ್ಟಲ್ಲದೆ ಶುಭಂಗೆ ಕರೆ ಮಾಡಿ‌ಪ್ರಾಣ ಬೆದರಿಕೆ ಹಾಕಿರೋದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.ಈ‌ ಸಂಬಂಧ ದೂರು ದಾಖಲಿಸಿದ ನಟ ಶುಭಂ ಶರ್ಮಾ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

02/06/2022 02:05 pm

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ