ಬೆಂಗಳೂರು: ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡು ಮೆಸೆಂಜರ್ ಚಾಟ್ ನಲ್ಲಿ ಅಶ್ಲೀಲ ಫೋಟೋ ವೀಡಿಯೋ ಕಳುಹಿಸುತ್ತಿದ್ದ ವಿಕೃತ ಕಾಮಿಯನ್ನ ಆಗ್ನೆಯ ವಿಭಾಗ ಪೊಲೀಸ್ರು ಬಂಧಿಸಿದ್ದಾರೆ. ಅಪ್ರಾಪ್ತ ಯುವತಿಯರನ್ನೆ ಹೆಚ್ಚಾಗಿ ಟಾರ್ಗೆಟ್ ಮಾಡ್ತಿದ್ದ ಆರೋಪಿ ಪುರುಷೋತ್ತಮನನ್ನ ಪೋಲಿಸರು ಬಂಧಿಸಿದ್ದಾರೆ.
ಮಡಿವಾಳ ನಿವಾಸಿಯಾಗಿರುವ ಆರೋಪಿ ಪುರುಷೋತ್ತಮ ಫೇಸ್ ಬುಕ್ ಮೂಲಕ ದೇಶ-ವಿದೇಶದ ಸುಂದರ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿತ್ತಿದ್ದ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡ್ತಿದ್ದಂತೆ ಮೆಸೆಂಜರ್ ಮೂಲಕ ಲೈಂಗಿಕ ಉತ್ತೇಜನ ನೀಡುವ ಫೋಟೋ & ವೀಡಿಯೋಗಳನ್ನ ಕಳಿಹಿಸಿ ಮಾನಸಿಕ ಹಿಂಸೆ ನೀಡ್ತುದ್ದ ಖತರ್ನಾಕ್ ಪುರುಷೋತ್ತಮ ನ ಮೇಲೆ ಆಗ್ನೇಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಕೇಸ್ ದಾಖಲಾದ ಹಿನ್ನೆಲೆ ಫೇಸ್ ಬುಕ್ ಐಡಿ ಮೂಲಕ ಆರೋಪಿಯನ್ನ ಪತ್ತೆ ಮಾಡಿ ಜೈಲಿಗೆ ಕಳುಹಿಸಿದ್ದಾರೆ.
Kshetra Samachara
01/06/2022 06:27 pm