ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ISD ಕರೆಗಳನ್ನು ಲೋಕಲ್ ಕಾಲ್ ಗಳಾಗಿ ಕನ್ವರ್ಟ್ ಮಾಡ್ತಿದ್ದ ಜಾಲ ಪತ್ತೆ!

ಬೆಂಗಳೂರು: ರಾಷ್ಟ್ರೀಯ ಭದ್ರತೆಗೆ ತೊಡಕು ಹಾಗೂ ಅನಧಿಕೃತವಾಗಿ ಟೆಲಿಪೋನ್ ಎಕ್ಸ್ ಚೆಂಜ್ ಮಾಡಿ ಭಾರತೀಯ ದೂರ ಸಂಪರ್ಕ ಇಲಾಖೆಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕೇರಳ ಮೂಲದ ಗ್ಯಾಂಗ್ ಅನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಅಂತರಾಷ್ಟ್ರೀಯ‌ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಅಕ್ರಮವಾಗ ಹಣ ಸಂಪಾದನೆ ಮಾಡುತ್ತಿದ್ದ 10 ಮಂದಿಯನ್ನು ಸಿಸಿಬಿ ಬಂಧಿಸಿತ್ತು. ಇದೀಗ ರಾಜಧಾನಿಯಲ್ಲಿ‌ ಐಕಾನ್‌ ಟೂರ್ ಅಂಡ್ ಟ್ರಾವೆಲ್ಸ್ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದ ಆರು ಮಂದಿ‌ ಆರೋಪಿಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಸ್ಥಳೀಯ ಕರೆಗಳನ್ನು ಇಂಟರ್ ನ್ಯಾಷನಲ್ ಕೇರಳದ ರವಿಚಂದ್ರ, ಸುಬೇರ್, ಮನು, ಇಸ್ಮಾಯಿಲ್ ಅಬ್ದುಲ್ಲಾ, ಸಾಹಿರ್ ಹಾಗೂ ಜೋಹರ್ ಶರಿಫ್ ಬಂಧಿತ ಆರೋಪಿಗಳಿಂದ ಏಳು ಲ್ಯಾಪ್ ಟಾಪ್, 204 ಸಿಮ್ ಕಾರ್ಡ್ 14 ಸಿಮ್ ಬಾಕ್ಸ್ , ಇಂಟರ್ ನೆಟ್ ವೈಫೈ ರೂಟರ್ಸ್ ಹಾಗೂ 9 ಮೊಬೈಲ್ ಫೋನ್ ಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.

ನಗರದ ಮಹದೇವಪುರದಲ್ಲಿ ಆರೋಪಿಗಳು ಸ್ಥಳೀಯ ವ್ಯಕ್ತಿಯ ಜೊತೆಗೆ ಸೇರಿ ಕಾಲ್ ಸೆಂಟರ್ ಗಳಿಗೆ ನೀಡಲಾಗುವ ಏರ್ ಟೆಲ್ SIP Trunk Call Device ನ್ನು ಪಡೆದು Icon Tours and Travels ಎಂಬ ಹೆಸರಿನಲ್ಲಿ ಕಂಪನಿ ಎಂದು ದಾಖಲೆ ಸೃಷ್ಟಿಸಿ ಏರ್‌ಟೆಲ್ ಕಂಪೆನಿಯ 180 ಪೋರ್ಟ್‌ಗಳಿರುವ ದೂರವಾಣಿ ಪಡೆದುಕೊಂಡು ಅನಧಿಕೃತವಾಗಿ ಟೆಲಿಪೋನ್ ಕರೆಗಳನ್ನು ಪರಿವರ್ತಿಸುವ ಉಪಕರಣಗಳನ್ನು ಇಟ್ಟುಕೊಂಡು Voice Over Internet Protocol) ಕರೆಗಳನ್ನು ಸ್ಥಳೀಯ GSM ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು.

ನಗರದ ಹೆಸರಘಟ್ಟ ರಸ್ತೆಯ ಚಿಕ್ಕಸಂದ್ರ ಮುಖ್ಯ ರಸ್ತೆ ಬಳಿ ಬಾಡಿಗೆ ಮನೆ ಪಡೆದು ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ಹಾಗೂ ಇತರೆ ರಾಜ್ಯದ BSNL ಸಿಮ್‌ ಕಾರ್ಡ್‌ ಪಡೆದು ಸಿಮ್ ಬಾಕ್ಸ್ ಡಿವೈಸ್‌ಗಳಿಗೆ ಅಳವಡಿಸಿಕೊಂಡು ಖಾಸಗಿ ಕಂಪೆನಿಯ ಇಂಟರ್‌ನೆಟ್ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಅಕ್ರಮ ದೂರವಾಣಿ ಸಂಪರ್ಕವನ್ನು ನಿರ್ಮಿಸಿಕೊಂಡಿದ್ದರು.

ಅಂತರ್‌ರಾಷ್ಟ್ರೀಯ‌ ಕರೆಗಳಿಗೆ ಒಂದು ನಿಮಿಷಕ್ಕೆ 10 ರೂಪಾಯಿವಿದ್ದರೆ ಅಕ್ರಮ ಮಾರ್ಗದ ಮೊರೆ ಹೋದರೆ ಕೇವಲ ಒಂದು ರೂ ನಲ್ಲಿ ಕರೆ ಮಾಡಬಹುದು. ಹೀಗೆ‌ ಒಂದು ತಿಂಗಳಲ್ಲಿ 17 ಲಕ್ಷ ಹಣ ಗಳಿಸಿದ್ದರು. ಅರೋಪಿಗಳು ಗಳಿಕೆಗಿಂತ ಹತ್ತು ಪಟ್ಟು ಹಣ ಸರ್ಕಾರಕ್ಕೆ ವಂಚನೆ ವಂಚಿಸಿದ್ದರು‌. ಅಲ್ಲದೆ ಇಂಟರ್ ನ್ಯಾಷನಲ್ ಕರೆ ಮೂಲಕ ಬೆದರಿಕೆ ಕರೆಗಳನ್ನು ಮಾಡುತ್ತಿದ್ದರು. ದುಬೈ ಮೂಲದ ಪುತ್ತೂರಿನ ವ್ಯಕ್ತಿ ಓರ್ವನಿಗೆ ಬೆದರಿಗೆ ಹಾಕಿದ್ದ ಕೇಸ್ ಸಹ ದಾಖಲಾಗಿತ್ತು.

ಇದು ಒಂದು ರೀತಿ ಫೋನ್ ಕರೆಗಳ ಡಾರ್ಕ್ ವೆಬ್‌ ಇದ್ದ ಹಾಗೆ. ಕರೆ ಮಾಡಿದವರ ನಂಬರ್ ಕರೆ ಸ್ವೀಕರಿಸಿದ ವ್ಯಕ್ತಿ ಗೆ ಗೊತ್ತಾಗುವುದಿಲ್ಲ. ಬದಲಾಗಿ ಬೇರೆ ನಂಬರ್ ನಿಂದ ಕರೆ ಬಂದ ರೀತಿ ಕಾಣಿಸುತ್ತದೆ. ಹೀಗಾಗಿ ಕೇಸ್ ದಾಖಲಾದರೂ ಸಹ ಯಾರು ಕರೆ ಮಾಡಿದ್ದರು ಎಂಬುವುದೇ ಗೊತ್ತಾಗುವುದಿಲ್ಲ. ಯಾಕಂದರೆ ಕರೆ ಬಂದಿದ್ದ ನಂಬರ್ ಸಿಡಿಆರ್ ಪಡೆದ್ರೆ ಆ ನಂಬರ್‌ಗೆ ಉಳಿದ ಮಾಹಿತಿ ಏನು ಸಿಗುವುದಿಲ್ಲ. ಹೀಗಾಗಿ ಅಪರಾಧ ಕೃತ್ಯಕ್ಕೆ ಈ ಮಾರ್ಗ ಬಳಸುತ್ತಾರೆ ಆರೋಪಿಗಳು.

Edited By : Nagesh Gaonkar
PublicNext

PublicNext

01/06/2022 06:06 pm

Cinque Terre

33.13 K

Cinque Terre

0

ಸಂಬಂಧಿತ ಸುದ್ದಿ