ಬೆಂಗಳೂರು: ಹೀಗೆ ಬಾಲಕನ ಬೆನ್ನಿನ ಮೇಲೆಲ್ಲಾ ಚಾಕುವಿನಲ್ಲಿ ತಿವಿದಿರುವಂತಿರೋ ಗಾಯದ ಗುರುತು, ಮತ್ತೋರ್ವ ಬಾಲಕನ ಕೈ, ಸೊಂಟ, ತಲೆ, ಕುತ್ತಿಗೆ ಭಾಗದಲ್ಲಿ ಆಗಿರೋ ಮಾರಣಾಂತಿಕ ಗಾಯಗಳು, ಈ ದೃಶ್ಯಗಳನ್ನ ನೋಡುದ್ರೆ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ನಡೆಸಿರುವ ಹಲ್ಲೆಯಂತೆ ಕಾಣುತ್ತೆ. ಅಸಲಿಗೆ ಇದು ಮನುಷ್ಯರು ಮಾಡಿರೋ ಗಾಯಗಳಲ್ಲ, ಮಕ್ಕಳ ಮೇಲೆ ಮೃಗೀಯವಾಗಿ ಬೀದಿ ನಾಯಿಗಳ ಗ್ಯಾಂಗ್ ನೆಡೆಸಿರೋ ದಾಳಿಯಿಂದಾದ ಗಾಯಗಳು. ಈ ರೀತಿ ಬೀದಿ ನಾಯಿಗಳಿಂದ ದಾಳಿ ಆಗಿರೋದು ಬೆಂಗಳೂರಿನ ಬಿಬಿಎಂಪಿ ವಾರ್ಡ್ 12ರ ಎಜಿಬಿ ಬಡಾವಣೆಯಲ್ಲಿ.
ಇನ್ನೂ ಯಾದಗಿರಿ ಮೂಲದ ಬೀರಪ್ಪ ಎಂಬುವರ ಮೂರು ವರ್ಷ ಮಗು ರವಿಕುಮಾರ್ ಮೇಲೆ ನಾಯಿಗಳ ಗ್ಯಾಂಗ್ ದಾಳಿ ಮಾಡಿದ್ದು, ದಾಳಿ ವೇಳೆ ಸ್ಥಳದಲ್ಲಿ ನಡೆದು ಸಾಗುತ್ತಿದ್ದ ಓರ್ವ ಯುವಕ ನಾಯಿಗಳಿಂದ ಬಾಲಕನನ್ನ ರಕ್ಷಿಸಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಸದ್ಯ ಡಿಸ್ಚಾರ್ಜ್ ಆಗಿ ಯಾದಗಿರಿಗೆ ತೆರಳಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ನಿನ್ನೆ ಸಂಜೆ ಸುಮಾರು ಐದು ಗಂಟೆ ವೇಳೆಗೆ ಪೋಷಕರೊಂದಿಗೆ ಮಗು ವಾಕ್ ಮಾಡುತ್ತಿದ್ದಾಗ ಪೋಷಕರ ಎದುರೇ ನಾಯಿಗಳ ಗ್ಯಾಂಗ್ ಮಗುವಿನ ಮೇಲೆ ಎರಗಿದ್ದು, 6 ವರ್ಷದ ಪುಟ್ಟ ಬಾಲನಿಗೆ ಗಂಭೀರ ಗಾಯಗಳಾಗಿದೆ, ಸದ್ಯ ಬಾಲಕ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ.
ಸದ್ಯ ಬಿಬಿಎಂಪಿ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿದ್ದ ಚಿಕನ್ ಅಂಗಡಿಯೊಂದನ್ನ ತಾತ್ಕಾಲಿಕವಾಗಿ ಮುಚ್ಚಿಸಿದ್ದನ್ನ ಬಿಟ್ಟರೆ ಬೇರೆ ಯಾವ ಕ್ರಮಗಳು ತೆಗೆದುಕೊಂಡಿಲ್ಲ ಎನ್ನಲಾಗಿದೆ. ಬೀದಿ ನಾಯಿಗಳಿಗೆ ಕಡಿವಾಣ ಹಾಕದ ಬಿಬಿಎಂಪಿ ವಿರುದ್ದ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು, ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
PublicNext
01/06/2022 07:32 am