ಬೆಂಗಳೂರು: ಬಾಲಕಾರ್ಮಿಕ ಎಂದು ಶಂಕಿಸಿ ಪ್ರಶ್ನಿಸಿದ್ದ ಶಿಕ್ಷಕನ ಮೇಲೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಲ್ಲೆ ಮಾಡಿದ್ದು, ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಪೂಜಿ ನಗರ ನಿವಾಸಿ ಶಿಕ್ಷಕರಾಗಿರುವ ಚಿಕ್ಕತಿಮ್ಮಯ್ಯ ಎಂಬುವರು ನೀಡಿದ ದೂರಿನ ಮೇರೆಗೆ ಮಾದೇಶ್ ಹಾಗೂ ದೇವರಾಜ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗೂ ವಿಚಾರಣೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದೆ.
ಜೈನ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕ ತಿಮ್ಮಯ್ಯ ಮೇ 27 ರಂದು ತಮ್ಮ ಬೈಕಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಇತ್ತೀಚೆಗೆ ಸಮೀಪದ ರಚನಾ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಗೆ ಹೋಗಿದ್ದರು. ಪೆಟ್ರೋಲ್ ಹಾಕುತ್ತಿದ್ದ ಸಿಬ್ಬಂದಿ ಬಾಲಕನಂತೆ ಕಂಡು ಬಂದಿದ್ದರಿಂದ ಆತನಿಂದ ವಿವರ ಪಡೆದಿದ್ದ. ಅನುಮಾನಗೊಂಡು ವಯೋಮಿತಿ ದೃಢೀಕರಿಸಲು ಬಂಕ್ ಮ್ಯಾನೇಜರ್ ಮಾದೇಶ್ ಗೆ ಬಾಲಕನ ಆಧಾರ್ ಕಾರ್ಡ್ ಹಾಗೂ ಮಾರ್ಕ್ಸ್ ಕಾರ್ಡ್ ನೀಡುವಂತೆ ಪ್ರಶ್ನಿಸಿದ್ದಾರೆ.
ಇದಕ್ಕೆ ಕೆರಳಿದ ಮಾದೇಶ್ ಗುಂಪು ಸೇರಿಸಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ. ಮಾಲೀಕ ದೇವರಾಜ್ ಬರುವವರೆಗೂ ಬೈಕ್ ಬಿಡೋದಿಲ್ಲ ಮಾದೇಶ್ ಅಂಡ್ ಆತನ ಸಹಚರರು ಕಸಿದುಕೊಂಡಿದೆ. ನಂತರ ಮಾಲೀಕ ದೇವರಾಜ್ ಬಂದು ಶಿಕ್ಷಕನ ಮೇಲೆ ಏಕಾಏಕಿ ಥಳಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾರಾಣಾಂತಿಕ ಹಲ್ಲೆ ನಡೆಸಿದೆ. ಸ್ಥಳದಿಂದ ಹೇಗೊ ತಪ್ಪಿಸಿಕೊಂಡು ಶಿಕ್ಷಕ ಬ್ಯಾಟರಾಯನಪುರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಶಿಕ್ಷಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Kshetra Samachara
31/05/2022 11:00 pm