ಆನೇಕಲ್: ಪೊಲೀಸರು ಎಂದು ಹೇಳಿ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಆನೇಕಲ್ - ಚಂದಾಪುರ ರಸ್ತೆಯ ಜೈ ಭೀಮ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಕಾರಿನಲ್ಲಿ ಬಂದಿದ್ದ ನಾಲ್ವರು ಮನೆಗೆ ನುಗ್ಗಿ ಹೊರ ರಾಜ್ಯದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ.
14 ಕಾರ್ಮಿಕರ ಮೇಲೆ ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿವೆ. ಇವರೆಲ್ಲ ಒಡಿಶಾ ಮೂಲದ ಕಂಬಿ ಕೆಲಸ ಮಾಡುವ ಕೂಲಿ ಕಾರ್ಮಿಕರಾಗಿದ್ದು, ಆನೇಕಲ್ ಜೈ ಭೀಮ್ ಪೆಟ್ರೋಲ್ ಬಂಕ್ ಬಳಿ 7 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಕಾರಿನಲ್ಲಿ ಬಂದ ನಾಲ್ವರು ಪೊಲೀಸ್ ಅಂತ ಹೇಳಿ, "ಮನೆಯಲ್ಲಿ ಜೋರಾಗಿ ಮಾತನಾಡುತ್ತಿದ್ದೀರಾ" ಎಂದು ಈ ಕೂಲಿಕಾರ್ಮಿಕರ ಮೇಲೆ ಮನಸೋ ಇಚ್ಛೆ ಹಲ್ಲೆಗೈದಿದ್ದಾರೆ. ಹಲ್ಲೆ ಸಂದರ್ಭ ಅಲ್ಲಿಂದ ಕೆಲವರು ಓಡಿ ಹೋಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಹಲ್ಲೆಕೋರರು ಯಾರೆಂಬುದು ತನಿಖೆಯಲ್ಲಿ ಗೊತ್ತಾಗಬೇಕಾಗಿದೆ. ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಹರೀಶ್ ಗೌತಮನಂದ ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್
PublicNext
30/05/2022 09:47 pm