ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಕ್ರಮವಾಗಿ ಡ್ರಗ್ಸ್, ಆನ್‌ಲೈನ್ ದಂಧೆ; 32 ಜನ ಆಫ್ರಿಕಾ ಪ್ರಜೆಗಳು ಪೊಲೀಸ್ ವಶ

ಬೆಂಗಳೂರು: ಬೆಂಗಳೂರಿನಲ್ಲಿ ಆಫ್ರಿಕಾ ಮೂಲದ ಅಕ್ರಮ ವಲಸಿಗರ ಕಾಟ ಹೆಚ್ಚಾಗಿದೆ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ 32 ಜನರನ್ನು‌ ಈಶಾನ್ಯ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಇವರಲ್ಲಿ 19 ಜನ ಪುರುಷರು, 13 ಜನ ಮಹಿಳೆಯರಿದ್ದಾರೆ. ಇವರನ್ನು ವಶಕ್ಕೆ ಪಡೆದು ಹೆಚ್ವಿನ ವಿಚಾರಣೆ ನಡೆಸಲಾಗುತ್ತಿದೆ.

ಈಶಾನ್ಯ ವಿಭಾಗದ ಕೊತ್ತನೂರು, ಸಂಪಿಗೇಹಳ್ಳಿ, ಅಮೃತಹಳ್ಳಿ, ಬಾಗಲೂರು, ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿ ಸುತ್ತಾಮುತ್ತಾ ಆಫ್ರಿಕಾ ಮೂಲದ ಅಕ್ರಮ ವಲಸಿಗರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಅಕ್ರಮವಾಗಿ ವಾಸಿವಷ್ಟೆ ಅಲ್ಲದೇ, ಡ್ರಗ್ಸ್ ದಂಧೆ ಮತ್ತು ಆನ್‌ಲೈನ್‌ನಲ್ಲಿ ಅಮಾಯಕರನ್ನು ವಂಚಿಸುವುದೇ ಇವರ ಕಾಯಕ. ಸದ್ಯ ಈಶಾನ್ಯ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರ ಕಾರ್ಯಾಚರಣೆ ನಡೆದಿದ್ದು, ಇನ್ನು ಮುಂದುವರೆಯಲಿದೆ.

Edited By : Vijay Kumar
Kshetra Samachara

Kshetra Samachara

30/05/2022 09:32 pm

Cinque Terre

1.46 K

Cinque Terre

0

ಸಂಬಂಧಿತ ಸುದ್ದಿ