ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಮ್ಯಾನೇಜರ್ ನ ಒತ್ತಡ ತಾಳಲಾರದೇ ಕಂಪನಿಯ ಲ್ಯಾಪ್‌ಟಾಪ್ ಗಳನ್ನೇ ಕಳ್ಳತನ ಮಾಡಿದ್ದ ಆರೋಪಿಯನ್ನ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮೊಹಮ್ಮದ್ ಆಜಂ, ಕೋರಮಂಗಲದ ವೇಕ್ ಫಿಟ್ ಇನ್ನೋವೇಷನ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಕಂಪನಿಯಲ್ಲಿ ಮ್ಯಾನೇಜರ್ ಕಡೆಯಿಂದ ಕೆಲಸದ ಒತ್ತಡ ಜಾಸ್ತಿ ಎಂದು ಆಜಂ ಬೇಸತ್ತಿದ್ದ. ಮ್ಯಾನೇಜರ್ ಗೆ ಬುದ್ಧಿ ಕಲಿಸಲು ಮೇ 25ರಂದು ತನಗೆ ಪರಿಚಿತ ಇಬ್ಬರು ಬಾಲಕರ ಮೂಲಕ ಕಂಪನಿಯ 8 ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದ!
ಕೋರಮಂಗಲ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನ ಬಂಧಿಸಿರುವ ಕೋರಮಂಗಲ ಠಾಣೆ ಪೊಲೀಸರು 2 ಲಕ್ಷ ಮೌಲ್ಯದ 8 ಲ್ಯಾಪ್‌ಟಾಪ್ ಮತ್ತು ಒಂದು ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆದಿದ್ದಾರೆ.
PublicNext
28/05/2022 10:02 pm