ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ತಡರಾತ್ರಿ 80 ವರ್ಷದ ಜಿಗುರಾಜ್ ಎಂಬವರನ್ನು ಕೊಲೆ ಮಾಡಲಾಗಿದೆ. ಚಾಮರಾಜ ಪೇಟೆಯ ಕಿಂಗ್ಸ್ ಎನ್ ಕ್ಲ್ವೇವ್ ನ 3ನೇ ಅಪಾರ್ಟ್ ಮೆಂಟ್ ನಲ್ಲಿ ಘಟನೆ ನಡೆದಿದ್ದು, ಜಿಗುರಾಜ್ ಸರ್ವೆಂಟ್ ಬಿಜೋರಾಮ್ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.
ಜಿಗುರಾಜ್ ಅವರ ಕೈಕಾಲು ಕಟ್ಟಿ, ಕುತ್ತಿಗೆ ಹಿಸುಕಿ ಹತ್ಯೆಗೈದು ಬಳಿಕ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ತಡರಾತ್ರಿ 11:30ಕ್ಕೆ ಘಟನೆ ನಡೆದಿರೋ ಸಾಧ್ಯತೆಯಿದ್ದು, 12 ಗಂಟೆಗೆ ಸರ್ವೆಂಟ್, ಅಪಾರ್ಟ್ ಮೆಂಟ್ ನಿಂದ ಹೊರ ಹೋಗ್ತಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಜಿಗುರಾಜ್ ದಶಕಗಳಿಂದ ಮಾರ್ಕೆಟ್ ನಲ್ಲಿ ಹೋಲ್ ಸೆಲ್ ಎಲೆಕ್ಟ್ರಾನಿಕ್ ಶಾಪ್ ಇಟ್ಟುಕೊಂಡಿದ್ರು. ಮಕ್ಕಳು ಔಟ್ ಆಫ್ ಸ್ಟೇಷನ್ ಹೋಗಿದ್ದ ವೇಳೆ ಹಂತಕ ಈ ಕೃತ್ಯವೆಸಗಿದ್ದಾನೆ. ಇಂದು ಬೆಳಿಗ್ಗೆ ಮೊಮ್ಮಗ ಶಾಪ್ ಓಪನ್ ಗೆ ಕೀ ಪಡೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಇತ್ತ ಪ್ರಕರಣ ದಾಖಲಾಗ್ತಿದ್ದಂತೆಯೇ ಹಿರಿಯ ಪಶ್ಚಿಮ ವಲಯ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ರು.
ಈಗಾಗಲೇ 3 ತಂಡಗಳನ್ನು ರಚಿಸಿ, ಹಂತಕನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ. ಆದ್ರೆ, ಮನೆಗೆಲಸದವನನ್ನು ನಂಬಿ ಹಿರಿಯ ಜೀವ ಮಸಣ ಸೇರಿದ್ದು ಮಾತ್ರ ದುರಂತವೇ ಸರಿ.
ಶ್ರೀನಿವಾಸ್ ಚಂದ್ರ ʼಪಬ್ಲಿಕ್ ನೆಕ್ಸ್ಟ್ ಬೆಂಗಳೂರುʼ
PublicNext
25/05/2022 04:42 pm