ಬೆಂಗಳೂರು: ಬಿಸ್ಕೆಟ್ ಬಿಸಿನೆಸ್ ಮಾಡುತ್ತಿನಿ ಅಕ್ಕಪಕ್ಕದವರಿಗೆ ಬಿಸ್ಕೆಟ್ ಹಾಕಿ ಲಕ್ಷ ಲಕ್ಷ ವಂಚಿಸಿದ್ದ ಆರೋಪಿಯನ್ನ ಕೆ ಜಿ ನಗರ ಪೊಲೀಸ್ರು ಬಂಧಿಸಿದ್ದಾರೆ.
ಬಿಸ್ಕೇಟ್ ಬಿಜಿನೆಸ್ ಮಾಡ್ತೀನಿ ನೀವು ಪಾಟ್ನರ್ ಆಗಿ ಅಂತ ಬಿಲ್ಡಪ್ ಕೊಟ್ಟು ನಂಬಿಕೆ ಬರೋ ರೀತಿ ಎಲ್ಲಾ ದಾಖಲೆಗಳನ್ನು ಕೊಟ್ಟು ನಂಬಿಸಿಹಣ ಪಡೆಯುತ್ತಿದ್ದ ಆರೋಪಿ ಮನೋಜ. ಬೆಸಿಕಲಿ ಇಂಜಿನಿಯರ್ ಆಗಿದ್ದ ಮನೋಜ ಬಿಸ್ಕಟ್ ಬಿಸಿನೆಸ್ ಕಹಾನಿ ಕಟ್ಟಿ ಅಕ್ಕಪಕ್ಕದ ಮನೆಯವರಿಂದ ಹಣ ವಸೂಲಿ ಮಾಡಿದ್ದ.
ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಮನೋಜ್ ನೆರೆ ಮನೆಯ ಕುಮುದ ಮತ್ತು ಇನ್ನಿತರಿರಿಗೆ ಬಿಸ್ಕೆಟ್ ಬ್ಯುಸಿನೆಸ್ ಕತೆ ಕಟ್ಟಿ 60 ಲಕ್ಷ ವಂಚಿಸಿದ್ದ. ಮನೋಜ್ ನಂಬಿಕೊಂಡು ಲಕ್ಷಾಂತರ ಹಣ ಕಳೆದುಕೊಂಡಿದ್ರು. ಸದ್ಯ ಘಟನೆ ಸಂಬಂಧಿಸಿದಂತೆ ಕೆಂಪೇಗೌಡ ನಗರ ಪೊಲೀಸರಿಂದ ಮನೋಜ್ ನ ತಿರುಪತಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
Kshetra Samachara
24/05/2022 07:54 pm