ದೊಡ್ಡಬಳ್ಳಾಪುರ: 112 ನಲ್ಲಿ ಚೇಸಿಂಗ್ ನಡೆಸಿದ ಪೊಲೀಸರು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 2 ಸಾವಿರಕ್ಕೂ ಹೆಚ್ಚು ಕೆಜಿ ಗೋಮಾಂಸವನ್ನ ವಶಕ್ಕೆ ಪಡೆದಿದ್ದಾರೆ.
ದೊಡ್ಡಬಳ್ಳಾಪುರ ವಿಭಾಗದ 112 ಪೊಲೀಸರು ದೊಡ್ಡಬಳ್ಳಾಪುರ-ಹಿಂದೂಪುರ ರಸ್ತೆಯ ಗುಂಜೂರು ಬಳಿಯ ಕಾರ್ಯ ನಿಮಿತ್ತ ಹೋಗುವಾಗ, ಕೆಟ್ಟು ನಿಂತಿದ್ದ ಟಾಟಾ ಏಸ್ ವಾಹನದಲ್ಲಿದ್ದವರನ್ನ ಮಾತಾಡಿಸಲು ಹೋದಾಗ, ಪೊಲೀಸರನ್ನ ಕಂಡ ಟಾಟಾ ಏಸ್‌ನಲ್ಲಿದ್ದವರು ಪರಾರಿಯಾಗಲು ಯತ್ನಿಸಿದರು, ತಕ್ಷಣವೇ 112 ವಾಹನದಲ್ಲಿ ಪೊಲೀಸರು ಚೇಸಿಂಗ್ ನಡೆಸಿ ಪರಾರಿಗೆ ಯತ್ನಿಸಿದವರನ್ನ ಹಿಡಿದಿದ್ದಾರೆ. ವಾಹನ ತಪಾಸಣೆ ನಡೆಸಿದ್ದಾಗ 2 ಸಾವಿರಕ್ಕೂ ಹೆಚ್ಚು ಕೆ.ಜಿಯ ಗೋಮಾಂಸ ಪತ್ತೆಯಾಗಿದೆ.
ಅಕ್ರಮವಾಗಿ ಗೋಮಾಂಸವನ್ನ ಹಿಂದೂಪುರದಿಂದ ಬೆಂಗಳೂರಿಗೆ ಸಾಗಿಸುತ್ತಿದದ್ದ ಪ್ರಕರಣ ಬೆಳಕಿಗೆ ಬಂದಿದೆ, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
22/05/2022 02:08 pm