ಬೆಂಗಳೂರು: ಜೆ.ಪಿ. ನಗರದಲ್ಲಿ ಕಳೆದ ತಿಂಗಳ 18ರಂದು ಪ್ರಿಯದರ್ಶಿನಿ ಜ್ಯುವೆಲ್ಲರಿಯ ಗೋಡೆ ಕೊರೆದು ಎಂಟ್ರಿ ಕೊಟ್ಟಿದ್ದ ಕಳ್ಳರು, ಗ್ಯಾಸ್ ಕಟ್ಟರ್ ಬಳಸಿ ಲಾಕರ್ ಒಡೆದು 2.5 ಕೋಟಿಗೂ ಅಧಿಕ ಮೌಲ್ಯದ 5 ಕೆಜಿ ಚಿನ್ನಾಭರಣ ಕದ್ದು ಪರಾರಿಯಾಗಿದ್ರು.
ಇನ್ನು, ಚಿನ್ನ ದೋಚಲು ಈ ಕಳ್ಳರು ಚಿನ್ನದಂಗಡಿ ಪಕ್ಕದಲ್ಲೇ ರೂಮ್ ಮಾಡಿ, ಒಳ್ಳೆಯ ಟೈಮ್ ಗಾಗಿ ಸ್ಕೆಚ್ ಹಾಕಿ ಕುಳಿತಿದ್ರು. ಈ ಸಂಬಂಧ ಜೆ.ಪಿ. ನಗರ ಪೊಲೀಸರು ದೂರು ದಾಖಲಿಸಿ ಖದೀಮರಿಗಾಗಿ ಹುಡುಕಾಟ ನಡೆಸುತ್ತಿದ್ರು. ಸಿಸಿ ಟಿವಿಯಲ್ಲಿ ಒಂದಷ್ಟು ಕ್ಲೂಗಳಿದ್ರೂ ಕಳ್ಳರು ಯಾರು? ಎಲ್ಲಿಯವರು ಅಂತ ಗೊತ್ತಾಗಿರ್ಲಿಲ್ಲ. ಈ ಸಂದರ್ಭ ಟೆಕ್ನಿಕಲ್ ಎವಿಡೆನ್ಸ್ ಕಲೆಕ್ಟ್ ಮಾಡಿದ ಇನ್ ಸ್ಪೆಕ್ಟರ್ ರಾಧಾಕೃಷ್ಣ ಕೊನೆಗೆ ಜಾರ್ಖಂಡ್ ನಲ್ಲಿ ಆರೋಪಿಗಳು ಅಡಗಿರೋದನ್ನ ಕನ್ಫರ್ಮ್ ಮಾಡಿದ್ರು.
ಇತ್ತ ಜೆ.ಪಿ. ನಗರ ಪಿಎಸ್ ಐ ಆಶಾ ಮತ್ತು ಕ್ರೈಂ ತಂಡ ಜಾರ್ಖಾಂಡ್ ಗೆ ತೆರಳಿ ಎ.ಎಂ ಹುಸೇನ್, ಮನರುಲ್ಲಾ ಹಕ್, ತಿಶೈನೂರ್ ಬೇಬಿ ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಿ 1 ಕೆಜಿ 100 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಈ ಕೇಸ್ ನ ಪ್ರಮುಖ ಆರೋಪಿ ಮನರುಲ್ಲಾ @ ಅನಾರುಲ್ಲಾ ಶೇಖ್ ಈ ಹಿಂದೆ ಕೂಡ ಜಯನಗರ ಪೊಲೀಸ್ರಿಂದ ಕಳ್ಳತನ ಕೇಸ್ ನಲ್ಲಿ ಬಂಧಿಸಲ್ಪಟ್ಟಿದ್ದ. ಜೈಲಿಂದ ಬಂದವ ತನ್ನ ಹಳೆ ತಂಡ ಕಟ್ಟಿಕೊಂಡು ದೊಡ್ಡಮಟ್ಟದಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ.
ಇದಕ್ಕಾಗಿ ಜೆ.ಪಿ. ನಗರ ಮೆಟ್ರೋ ಬಳಿ ಇದ್ದ ಪ್ರಿಯದರ್ಶಿನಿ ಜ್ಯುವೆಲ್ಲರಿಯನ್ನು ಆಯ್ಕೆ ಮಾಡ್ಕೊಂಡಿದ್ದ. ಮನರುಲ್ಲಾ ಅಂದು ಕೊಂಡಂತೆ ಕೆಲಸ ಸಾಧಿಸಿ ಜಾರ್ಖಂಡ್ ಗೆ ಪರಾರಿಯಾಗಿದ್ದ. ಅಂತೂ ಪೊಲೀಸ್ರ ಸತತ ಪ್ರಯತ್ನದಿಂದ 5 ಕೆಜಿ ಚಿನ್ನ ದೋಚಿದ ಗ್ಯಾಂಗ್ ಅರೆಸ್ಟ್ ಆಗಿದೆ.
- ಶ್ರೀನಿವಾಸ್ ಚಂದ್ರ ʼಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ʼ
PublicNext
21/05/2022 10:02 pm