ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ಮತ್ತೊಂದು ತಿರುವು ಪಡೆದುಕೊಂಡಿದೆ. ಮೊದಲಿಗೆ ಹನಿಟ್ರ್ಯಾಪ್‌ನಿಂದ ಬೇಸತ್ತು ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿರೋ ದೂರು ದಾಖಲಾಗಿತ್ತು. ದೂರಿನನ್ವಯ ಆರೋಪಿ ರೇಖಾ ಈಗಾಗ್ಲೆ ಜೈಲು ಸೇರಿದ್ದು ಕೇಸ್ ಸದ್ಯ ಯೂ ಟರ್ನ್ ತೆಗೆದುಕೊಳ್ಳುವ ಸಾಧ್ಯತೆ ಕಾಣ್ತಿದೆ. ಅನಂತರಾಜುಗೆ ಪತ್ನಿ ಸುಮಾ ಟಾರ್ಚರ್ ಕೊಟ್ಟಿದ್ದಾಳೆ ಅನ್ನುವ ಆಡಿಯೋ ವೈರಲ್ ಆಗಿದ್ದು ಆಡಿಯೋ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ವೈರಲ್ ಆಡಿಯೋ ಜೊತೆಗೆ ಸುಮಾ ಆಡಿಯೋ ಸ್ಯಾಂಪಲ್ ನೂ ಎಫ್ ಎಸ್ ಎಲ್ ಗೆ ಕಳುಹಿಸಲು ಬ್ಯಾಡರಹಳ್ಳಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಸದ್ಯ ಬ್ಯಾಡರಹಳ್ಳಿ ಪೊಲೀಸರು ಅನಂತರಾಜು ಪತ್ನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅನಂತರಾಜು ಆತ್ಮಹತ್ಯೆಗೆ ಬಳಸಿದ್ದ ಬಟ್ಟೆ ಮಿಸ್ ಆಗಿದ್ದು ಇದ್ರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಠಾಣೆಗೆ ಹಾಜರಾಗುವಾಗ ಅನಂತರಾಜು ಆತ್ಮಹತ್ಯೆಗೆ ಬಳಸಿದ್ದ ಬಟ್ಟೆ ಹಾಗೂ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಒದಗಿಸುವಂತೆ ಸುಮಾಳಿಗೆ ಸೂಚಿಸಲಾಗಿದೆ.
ಸುಮಾ ಸ್ಟೇಟ್ ಮೆಂಟ್ ವೇಳೆ ಆಡಿಯೋ ಬಗ್ಗೆ ಕೂಡ ಪೊಲೀಸರು ಪ್ರಶ್ನೆ ಮಾಡೋ ಸಾಧ್ಯತೆಯಿದ್ದು ಈ ಸಮಯದಲ್ಲೇ ಸುಮಾ ವಾಯ್ಸ್ ಸ್ಯಾಂಪಲ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇನ್ನೂ ಅನಂತರಾಜು ಡೆತ್ ನೋಟ್ ಕೂಡ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಡೆತ್ ನೋಟ್ ನ ಅನಂತರಾಜು ಸಾವಿಗೂ ಕೆಲ ದಿನಗಳ ಮೊದಲೇ ಬಲವಂತವಾಗಿ ಬರೆಸಿರುವ ಅನುಮಾನ ವ್ಯಕ್ತವಾಗಿದೆ. ಈಗಾಗ್ಲೇ ಡೆತ್ ನೋಟ್ ನ ಎಫ್ ಎಸ್ ಎಲ್ ಗೆ ಕಳುಹಿಸಿದ್ದು ರಿಪೋರ್ಟ್ ಗಾಗಿ ಪೊಲೀಸರು ಕಾಯ್ತಿದ್ದಾರೆ. ಒಟ್ಟಾರೆಯಾಗಿ ನೋಡೋದಾದ್ರೆ ಒಂದು ವೇಳೆ ಸುಮಾ ಆಡಿಯೋ ಮತ್ತು ವೈರಲ್ ಆಡಿಯೋ ಮ್ಯಾಚ್ ಆದ್ರೆ ಅನಂತರಾಜು ಪತ್ನಿ ಸುಮಾಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.
PublicNext
21/05/2022 08:00 pm