ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪಗೆ ಸಂಬಂಧಿಸಿದ ಐದು ವಿವಿಧ ಸ್ಥಳಗಳಲ್ಲಿ ಇಂದು ಎಸಿಬಿ ದಾಳಿ ನಡೆಸಿದೆ.
ಭೋವಿ ನಿಗಮದ ಹಣ ದುರ್ಬಳಕೆ ಹಾಗೂ ಅಸಮತೋಲಿತ ಆಸ್ತಿ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಎಸಿಬಿ ತಂಡಗಳು ಬೆಂಗಳೂರಿನ ವಿಜಯನಗರದ ನಾಗರಾಜಪ್ಪರ ವಾಸದ ಮನೆ, ವಿಜಯನಗರದ ಎಂ.ಸಿ ಲೇಔಟಿನಲ್ಲಿರುವ ನಾಗರಾಜಪ್ಪ ಸಹೋದರನ ಮನೆ, ಮಾಗಡಿ ರಸ್ತೆಯ ಪರಿಚಿತರ ಅಪಾರ್ಟ್ಮೆಂಟ್, ಹೊಸಕೋಟೆಯ ವಾಸದ ಮನೆ, ಚೆನ್ನಪಟ್ಟಣದ ಸಂಬಂಧಿಕರ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ನಿನ್ನೆಯಷ್ಟೇ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ನಡೆಸಿದ್ದ ಸುದ್ದಿಗೋಷ್ಟಿಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾದ ಮಂಜುನಾಥ್ ಪ್ರಸಾದ್ ಹಾಗೂ ಮಣಿವಣ್ಣನ್ ವಿರುದ್ದ ಆರೋಪ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಹಾಜರಿದ್ದ ನಾಗರಾಜಪ್ಪ 'ನಾಳೆ ನನ್ನ ಮೇಲೆ ಎಸಿಬಿ ದಾಳಿಯಾಗುತ್ತೆ' ಎಂದಿದ್ದರು. ಅದ್ರಂತೆ ಇಂದು ಎಸಿಬಿ ದಾಳಿ ನಡೆಸಿದೆ.
PublicNext
19/05/2022 06:52 pm