ವರದಿ: ಬಲರಾಮ್ ವಿ
ಬೆಂಗಳೂರು: ನಿನ್ನೆ ರಾತ್ರಿ ಸುರಿದ ಮಳೆಗೆ ನಾಗರ ಹಾವೊಂದು ಟ್ರಾನ್ಸ್ ಫಾರಂ ಬಾಕ್ಸ್ ಒಳಗಡೆ ಹೋಗಿದ್ದರಿಂದ ರಾತ್ರಿಯಿಡಿ ಕರೆಂಟ್ ಇಲ್ಲದೆ ಜನರು ನಿದ್ದೆಗೆಡುವಂತಾಗಿತ್ತು.
ಹೌದು ಬೆಂಗಳೂರು ಪೂರ್ವ ತಾಲ್ಲೂಕಿನ ಕೆಆರ್ ಪುರದಲ್ಲಿ ಸುರಿದ ಮಳೆಗೆ ಹಾವೊಂದು ಟ್ರಾನ್ಸ್ ಫಾರಂ ಬಾಕ್ಸ್ ಹೋಗಿದ್ದರಿಂದ ವಿದ್ಯುತ್ ತಂತಿ ತಗಲಿ ಹಾವು ಸಾವನ್ನಪ್ಪಿದೆ. ಇಂದು ಕೆಇಬಿ ಅಧಿಕಾರಿಗಳು ಪರಿಶೀಲಿಸಲು ಸ್ಥಳಕ್ಕೆ ಬಂದಾಗ ನಾಗರ ಹಾವೊಂದು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ರಾತ್ರಿ ವಿದ್ಯುತ್ ತಂತಿ ತಗುಲಿ ಹಾವು ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Kshetra Samachara
18/05/2022 08:46 pm