ಯಲಹಂಕ: ಇತ್ತೀಚೆಗೆ ಆಫ್ರಿಕಾ ಮೂಲದವರ ಅಸಭ್ಯ ವರ್ತನೆ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ವಿದ್ಯಾರ್ಥಿ, ವ್ಯವಹಾರದ ವೀಸಾ ಪಡೆದು ಭಾರತಕ್ಕೆ ಬರುವ ಇವರಲ್ಲಿ ಶೇ 95ರಷ್ಟು ಜನ ಅಕ್ರಮ ಮಾದಕವಸ್ತುಗಳ ಮಾರಾಟ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿನ್ನೆಯೊಬ್ಬ ನೈಜೀರಿಯನ್ ಪ್ರಜೆ ಜೇಮ್ಸ್ ಎಂಬಾತ ಎಣ್ಣೆ-ಡ್ರಗ್ಸ್ ಮತ್ತಲ್ಲಿ ಬೆತ್ತಲೆಯಾಗಿ ಓಡಾಡಿ, ವಶಕ್ಕೆ ಪಡೆಯಲು ಬಂದ ಸಂಪಿಗೇಹಳ್ಳಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದಾನೆ.
ಆಫ್ರಿಕಾ ಮೂಲದ ವಿವಿಧ ರಾಷ್ಟ್ರಗಳ ಸಾವಿರಾರು ಜನ ಭಾರತ, ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ, ಪ್ರವಾಸ ಮತ್ತು ವ್ಯಾಪಾರ ವೀಸಾಗಳಲ್ಲಿ ಬಂದು ನೆಲೆಸಿದ್ದಾರೆ. ಬರುವವರಿಗೇನು ಕಡಿಮೆ ಇಲ್ಲ. ಆದರೆ ವೀಸಾ ಅವದಿ ಮುಗಿದ ಮೇಲೆ ಅವರು ತಮ್ಮ ಸ್ವದೇಶಗಳಿಗೆ ವಾಪಸ್ ಹೋಗ್ತಾರಾ ಅನ್ನೋದೇ ಯಕ್ಷ ಪ್ರಶ್ನೆ. ಪ್ರಮುಖವಾಗಿ ಬೆಂಗಳೂರಿನ ಪೂರ್ವ ಮತ್ತು ಈಶಾನ್ಯ ಭಾಗದ ಬಾಣಸವಾಡಿ, ಹೆಣ್ಣೂರು, ಕೊತ್ತನೂರು, ಸಂಪಿಗೇಹಳ್ಳಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಆಫ್ರಿಕಾ ಮೂಲದ ಪ್ರಜೆಗಳು ಅಕ್ರಮ ಚಟುವಟಿಕೆಗಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಥಳೀಯ ಜನರ ಮೇಲೆ, ಪೊಲೀಸರ ಮೇಲೆ ಇವರಿಗೆ ಗೌರವ ಇಲ್ಲ. ಇಲ್ಲಿನ ಕಾನೂನಿಗೆ ಬೆಲೆ ಕೊಡಲ್ಲ. ನಿನ್ನೆ ಜೇಮ್ಸ್ ಎಂಬಾತನಿಂದ ಹಲ್ಲೆಗೊಳಗಾದ ಸಂಪಿಗೇಹಳ್ಳಿ ಪೊಲೀಸ್ ಪೇದೆ ಶ್ರೀನಿವಾಸಮೂರ್ತಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರಿನನ್ವಯ ಜೇಮ್ಸ್ ನ ವಶಕ್ಕೆ ಪಡೆಯಲಾಗಿದೆ.
ರಾಜ್ಯ ಮತ್ತು ನಗರದ ಡ್ರಗ್ಸ್ ವಹಿವಾಟಿನ ಶೇ 75ರಷ್ಟನ್ನು ಇವರೆ ನಡೆಸುತ್ತಾರೆ. ಜೊತೆಗೆ ಚೀಟಿಂಗ್, ಎಣ್ಣೆ-ಡ್ರಗ್ಸ್ ಗಲಾಟೆಗಳಿಗೇನು ಕಡಿಮೆ ಇಲ್ಲ. ಜೆ.ಸಿ.ನಗರದಲ್ಲಿ ಡ್ರಗ್ಸ್ ಸೇವಿಸಿ ಸತ್ತಿದ್ದವನನ್ನು ಪೊಲೀಸರು ಲಾಕಪ್ ಡೆತ್ ಮಾಡಿದ್ದಾರೆಂದು ಪೊಲೀಸರ ಮೇಲೆಯೇ ದಾಳಿ ನಡೆಸಿ ಇಂಟರ್ನ್ಯಾಷನಲ್ ನ್ಯೂಸ್ ಮಾಡಿದ್ದರು. ಇಂತಹದ್ದೆ ಘಟನೆ ನೆನ್ನೆ ಸಂಪಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿವರಾಮಕಾರಂತ ಬಡಾವಣೆಲಿ ನಿನ್ನೆ ರಾತ್ರಿ ನಡೆದಿದೆ. ಪೊಲೀಸರ ವಶಕ್ಕೆ ಪಡೆಯಲು ಬಂದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದ ಜೇಮ್ಸ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕುಡಿದು ಕೃತ್ಯ ನಡೆಸಿದ್ದಾನಾ, ಡ್ರಗ್ಸ್ ಸೇವಿಸಿದ್ದಾನಾ ಎಂಬ ಯಾವ ತನಿಖೆಯ ಬಗ್ಗೆಯೂ ಈತ ಪೊಲೀಸರಿಗೆ ಸಹಕರಿಸುತ್ತಿಲ್ಲ ಎಂದರೆ ಇವರ ಉದ್ಧಟತನದ ಪರಮಾವದಿ ಎಷ್ಟು ಎಂಬುದು ತಿಳಿಯುತ್ತದೆ.
PublicNext
15/05/2022 08:47 pm