ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜಕೀಯಕ್ಕೆ ಸಾಲಗಾರನಾಗಿ ಕಳ್ಳಮಾರ್ಗಕ್ಕಿಳಿದು ಪೊಲೀಸರಿಗೆ ಸಿಕ್ಕಿಬಿದ್ದ ಭಾವಿ ರಾಜಕಾರಣಿ

ಯಲಹಂಕ: ರಾಜಕೀಯ ಅಷ್ಟು ಸುಲಭದ ಸಂಪಾದನೆ ಮಾರ್ಗವಲ್ಲ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಖರ್ಚು ಮಾಡಿದ್ದ ಲಕ್ಷಾಂತರ ಹಣ ವಾಪಸ್ ಪಡೆಯಲು ಆತ ಆಯ್ಕೆ ಮಾಡಿಕೊಂಡ ಮಾರ್ಗ ಕಳ್ಳತನ. ಈ ಫೋಟೋದಲ್ಲಿರುವ ಈತನ‌ ಹೆಸರು ವೆಂಕಟೇಶ್ ನಾಯಕ್. 36 ವರ್ಷ ವಯಸ್ಸಿನ ಈತ ಮೂಲತಃ ಕೋಲಾರ ಮೂಲದವನು. ಚುನಾವಣೆಗೆ ಮಾಡಿದ್ದ ಸಾಲ ತೀರಿಸಲಾರದೆ ಇದ್ದ ಕಾರನ್ನು ಮಾರಾಟ ಮಾಡಿದ್ದ. ಕಾರಿಲ್ಲದೆ ಪರದಾಡಿ ಕಾರನ್ನು ಖರೀದಿಸಲು ಹೊಂಚು ಹಾಕಿದ್ದ.

OLX Auto ಜಾಹೀರಾತಿನಲ್ಲಿ ಮಾರುತಿ ವೆಟಾರಾ ಬ್ರೇಜಾ ಕಾರನ್ನು ನೋಡಿ ಕೊಂಡುಕೊಳ್ಳಲು ಮಾಲೀಕರನ್ನು ಭೇಟಿಯಾಗಿದ್ದ. ಟೆಸ್ಟ್ ಡ್ರೈವ್ ಮಾಡಿ ಬರುತ್ತೇನೆ ಎಂದು ಕೀ ಪಡೆದವನು ಕಾರಿನ‌ ಸಮೇತ ಎಸ್ಕೇಪ್ ಆಗಿದ್ದ. ಕಳೆದ ಜನವರಿ 30ರಂದು ಕಾರಿನ ಸಮೇತ ನಾಪತ್ತೆಯಾಗಿದ್ದ. ಈ ಬಗ್ಗೆ ಕಾರು ಮಾಲೀಕ ರವೀಂದ್ರ ಅಮೃತಹಳ್ಳಿ ಪೊಲೀಸರಿಗೆ ಕಾರು ಕಳ್ಳತನದ‌ ದೂರು ದಾಖಲಿಸಿದ್ದರು.

ದೂರಿನನ್ವಯ ಟೆಕ್ನಿಕಲ್ ರೀತಿ ಆಸಾಮಿಯನ್ನು ಮೇ 10ರಂದು ವಶಕ್ಕೆ ಪಡೆದು ವಿಚಾರಿಸಿದಾಗ. ಇದೇ ವೆಂಕಟೇಶ್ ‌ನಾಯಕ್ ಬಾಗಲೂರು ‌ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಕದ್ದು, ಅದರಿಂದ ಕಾರು ಖರೀದಿಗೆ ಯತ್ನಿಸಿ ಎಸ್ಕೇಪ್ ಆಗಿದ್ದ ಪ್ರಕರಣವೂ ಬೆಳಕಿಗೆ ಬಂದಿದೆ. ಸದ್ಯ ಕಳ್ಳತನವಾಗಿದ್ದ ಕಾರು ಅಸಲಿ ಮಾಲೀಕರ ಕೈಸೇರಿದ್ದರೆ ಕಳ್ಳ ಜೈಲುಪಾಲಾಗಿದ್ದಾನೆ.

ಪ್ರಾಮಾಣಿಕವಾಗಿ ಬದುಕುವುದೇ ಕಷ್ಟ ಅಂತ್ರದಲ್ಲಿ ಭವಿಷ್ಯದ ರಾಜಕಾರಣಿ ಉತ್ತಮ ರೀತಿಯಲ್ಲಿ ಬದುಕುವುದನ್ನು ಬಿಟ್ಟು, ಕಳ್ಳತನಕ್ಕಿಳಿದು ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್, ಯಲಹಂಕ

Edited By : Manjunath H D
Kshetra Samachara

Kshetra Samachara

15/05/2022 05:01 pm

Cinque Terre

4.87 K

Cinque Terre

0

ಸಂಬಂಧಿತ ಸುದ್ದಿ