ಬೆಂಗಳೂರು: ಬಸ್ ಗಾಗಿ ಕಾಯುತ್ತಿದ್ದ ವೇಳೆ ವಿದ್ಯುತ್ ಹರಿದು ವ್ಯಕ್ತಿ ಸಾವನ್ನಪ್ಪಿರೋ ಘಟನೆ ನಗರದ ಹೆಬ್ಬಾಳ
ಬಸ್ ನಿಲ್ದಾಣದ ಬಳಿ ನಡೆದಿದೆ.
ಮೃತ ದೇಹವನ್ನ ಪೊಲೀಸ್ರು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ.ಸಂಜೆ ಮಳೆ ಬರ್ತಿದ್ದ ವೇಳೆ ಬಸ್ ನಿಲ್ದಾಣದ ಬಸ್ ಶೆಲ್ಟರ್ ನಲ್ಲಿ ಕುಳಿತಿದ್ದ 35 ವರ್ಷ ಆಸುಪಾಸಿನ ವ್ಯಕ್ತಿ. ನಾಲ್ವರು ವ್ಯಕ್ತಿಗಳು ಬಸ್ ಶೆಲ್ಟರ್ ನಲ್ಲಿ ಕುಳಿತಿದ್ರು.
ಈ ವೇಳೆ ಕರೆಂಟ್ ಶಾಕ್ ಹೊಡೆದಂಗೆ ಆಗಿತ್ತು.ಆಗ ಮೂವರು ಬಸ್ ಶೆಲ್ಟರ್ ನಿಂದ ಎದ್ದು ಹೊರ ಓಡಿದ್ರು.ಮೃತ ವ್ಯಕ್ತಿ ಚಪ್ಪಲಿ ಕೆಳಗೆ ಬಿಟ್ಟು ಸೀಟ್ ಮೇಲೆ ಕುಳಿತಿದ್ದ.ಓಡುವ ರಭಸದಲ್ಲಿ ಬೋರ್ಡ್ ಟಚ್ ಆಗಿದೆ. ಈ ವೇಳೆ ಆತನಿಗೆ ಕರೆಂಟ್ ಶಾಕ್ ಹೊಡೆದು ಶೆಡ್ ನಲ್ಲೆ ಕುಸಿದು ಬಿದ್ದಿದ್ದ. ಕೂಡಲೇ ಸ್ಥಳೀಯರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದ್ರು.ಮಾರ್ಗ ಮಧ್ಯೆ ಈ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾನೆ.
Kshetra Samachara
15/05/2022 11:55 am