ಬೆಂಗಳೂರು:ಸಿಸಿಬಿ ಪೋಲೀಸ್ರು ಕಾರ್ಯಾಚರಣೆ ನಡೆಸಿ ಹೈ ಎಂಡ್ ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ.
ಇಮ್ರಾನ್ ಬಂಧಿತ ಆರೋಪಿಯಾಗಿದ್ದು ಆರೋಪಿಯಿಂದ ಐದು ಲಕ್ಷ ಮೌಲ್ಯದ ಐದು ಕೆಜಿ ಗಾಂಜಾ ಸೀಜ್ ಮಾಡಿದ್ದಾರೆ.ಗಾಂಜಾ ಸೊಪ್ಪಿನ ಜೊತೆಗೆ ಗಾಂಜಾ ಹೂವನ್ನು ಕೂಡ ಹೆಚ್ಚಿನ ಬೆಲೆಗೆ ಆರೋಪಿ ಮಾರಾಟ ಮಾಡ್ತಿದ್ದ. 1500-2000 ಕ್ಕೆ ಒಂದು ಪ್ಯಾಕೇಟ್ ನಂತೆ ಕಾಲೇಜಯ ವಿದ್ಯಾರ್ಥಿಗಳು ಹಾಗೂ ನಾರ್ಥ್ ಇಂಡಿಯಾ ಕೂಲಿ ಕಾರ್ಮಿಕರಗೆ ಈ ಗಾಂಜಾ ಸಪ್ಲೈ ಮಾಡ್ತಿದ್ದ ಎಂದು ತಿಳಿದು ಬಂದಿದೆ.
ಸದ್ಯ ಬಂಧಿತ ನಿಂದ ಐದು ಕೆಜಿ ಗಾಂಜಾ, ಮೊಬೈಲ್ ಫೋನ್, ವೇಯಿಂಗ್ ಮಷಿನ್ ಸೀಜ್ ಮಾಡಿಲಾಗಿದ್ದು ಇಮ್ರಾನ್ ಜೊತೆಗಿದ್ದ ಮತ್ತೋರ್ವ ಆರೋಪಿ ಎಸ್ಕೇಪ್ ಆಗಿದ್ದು ಆತನ ಪತ್ತೆಗೂ ಸಿಸಿಬಿ ಬಲೇ ಬೀಸಿದೆ.
Kshetra Samachara
15/05/2022 10:45 am