ಬೆಂಗಳೂರು: ಬಿಲ್ಡಪ್ ವಿಡಿಯೋ ಮಾಡಿ ವೈರಲ್ ಮಾಡಿದ್ದ ಸಂಜು-ವೀರೂ ಗ್ಯಾಂಗ್‌ಅನ್ನು ಸಿಸಿಬಿ ಪೊಲೀಸರು ಹೆಡೆ ಮುರಿ ಕಟ್ಟಿದ್ದಾರೆ .
ಕಾರಿನಲ್ಲಿ ಮಾರಕಾಸ್ತ್ರ ಇಟ್ಟುಕೊಂಡು ದರೋಡೆಗೆ ಸಂಚು ರೂಪಿಸಿದ್ದ ವೇಳೆ ಸಿಸಿಬಿ ಬಲೆಗೆ ಗ್ಯಾಂಗ್ ಬಿದ್ದಿದೆ.
ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಎಸ್ಐ ಕಾಲೇಜು ಬಳಿ ಬಿಳಿ ಬಣ್ಣದ ಕಾರಿನಲ್ಲಿ ಅಪರಿಚಿತರು ಮಾರಕಾಸ್ತ್ರ ಸಮೇತ ಹಿಡಿದುಕೊಂಡು ಸಾರ್ವಜನಿಕರನ್ನು ಗುರಿಯಾಗಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ರೌಡಿನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ೧೦ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಸಂಜು, ವೀರು, ಕಳ್ಳ ಜಗ್ಗ, ಸಾಗರ ಸೇರಿದಂತೆ ಹಲವರ ವಿರುದ್ಧ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣ ದಾಖಲಾಗಿವೆ. ಸದ್ಯ ಆರೋಪಿಗಳ ಬಂಧನದಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಾರು ಹಾಗೂ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ. ಇನ್ನೂ ಆರೋಪಿಗಳು ಹಳೇ ರೌಡಿ ಶೀಟರ್ ಮುಲಾಮ್ @ಲೋಕೇಶ್ ಹಾಗೂ ಕ್ಯಾಟ್ ರಾಜನ ಹತ್ಯೆಗೆ ಸ್ಕೆಚ್ ಹಾಕಿದ್ರು ಎಂದು ತಿಳಿದು ಬಂದಿದೆ.
PublicNext
13/05/2022 05:46 pm