ಬೆಂಗಳೂರು: ಸರ ಕಳ್ಳತನ, ಬೈಕ್ ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ 8 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ಗಳನ್ನ ಸೀಜ್ ಮಾಡಿದ್ದಾರೆ.
ವೆಂಕಟೇಶ್, ಶ್ರೀಶೈಲ, ಅವಿನಾಶ್, ಪ್ರಕಾಶ್ ಮತ್ತು ಹನುಮಂತ ಬಂಧಿತ ಆರೋಪಿಗಳಾಗಿದ್ದು,ವಿಲಾಸಿ ಜೀವನಕ್ಕೆ ಬೈಕ್ ಕಳ್ಳತನವನ್ನ ವೃತ್ತಿ ಮಾಡಿಕೊಂಡಿದ್ರು.ಕದ್ದ ಬೈಕ್ ಗಳನ್ನ ಗ್ರಾಮಾಂತರ ಭಾಗದಲ್ಲಿ ಹಾಫ್ರೇಟ್ ಚೀಫ್ ರೇಟ್ ಮಾರಾಟಮಾಡಿ ಹಣ ಸಂಪಾದನೆ ಮಾಡ್ತಿದ್ರು. ಇನ್ನೂ ಕದ್ದ ಬೈಕ್ ನಲ್ಲಿ ಸರಗಳ್ಳತನ ಮತ್ತು ಮೊಬೈಲ್ರಾಬರಿ ಕೂಡ ಮಾಡ್ತಿದ್ರು ಎಂದು ಪೊಲೀಸ್ರು ತಿಳಿಸಿದ್ದಾರೆ.
ರಾತ್ರಿ ಸಮಯದಲ್ಲಿ ವ್ಯಕ್ತಿಯಿಬ್ಬರ ಸರವನ್ನು ಅನ್ನಪೂರ್ಣೇಶ್ವರಿ ನಗರದಲ್ಲಿ ಕಿತ್ತು ಪರಾರಿಯಾಗಿದ್ರು. ಈ ಬಗ್ಗೆ ಅನ್ನಪೂರ್ಣೇಶ್ವರಿನಗರ ಪೊಲೀಸ್ರು ಆರೋಪಿಗಳ ಪತ್ತೆಗೆ ಇನ್ಸ್ಪೆಕ್ಟರ್ ಲೋಹಿತ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Kshetra Samachara
07/05/2022 07:54 pm