ವರದಿ- ಗಣೇಶ್ ಹೆಗಡೆ
ಬೆಂಗಳೂರು: ಬಿಬಿಎಂಪಿಯಲ್ಲಿ ಒಂದು ಪೋಸ್ಟ್ ಗೆ ಇಬ್ಬರ ನೇಮಕ ಮಾಡಲಾಗಿದೆ. ಪಾಲಿಕೆಯ ಹಣ ಕಾಸು ವಿಭಾಗಕ್ಕೆ ಇಬ್ಬರು ಅಪರ ಆಯುಕ್ತರ ನೇಮಕ ಮಾಡಲಾಗಿದ್ದು, ಇಬ್ಬರಿಗೂ ಪ್ರತ್ಯೇಕ ಚೇಂಬರ್, ಸಾಲರಿ, ಸಹಾಯಕ ಕಚೇರಿ ನೀಡಲಾಗಿದೆ ಎಂಬ ಪಬ್ಲಿಕ್ ನೆಕ್ಸ್ಟ್ ಕೊಟ್ಟ ವರದಿ ಈಗ ಬಿಗ್ ಇಂಪ್ಯಾಕ್ಟ್ ಮಾಡಿದೆ.
ಪಬ್ಲಿಕ್ ನೆಕ್ಸ್ಟ್ ವರದಿ ಆಧರಿಸಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೆನಿ ಕ್ರಮ ಜರುಗಿಸಿದ್ದಾರೆ.
ಹಣಕಾಸು ವಿಭಾಗದ ಅಪರ ಆಯುಕ್ತ ಎಸ್.ವೆಂಕಟೇಶ ಹಾಗೂ ಅದೇ ಹುದ್ದೆಯನ್ನು ನಾಗರಾಜ್ ಶೇರೇಗಾರ್ ನಿರ್ವಹಿಸುತ್ತಿದ್ದರು.
ಇದೀಗ ಎಸ್ ವೆಂಕಟೇಶ ರವರನ್ನು ವರ್ಗಾಯಿಸಲಾಗಿದೆ. ಅಪರ ಆಯುಕ್ತರಾಗಿ ನಾಗರಾಜ್ ಶೇರೇಗಾರ್ ಅವರನ್ನು ಮುಂದುವರಿ ಸಲಾಗಿದೆ.
ಇಬ್ಬರು ಒಂದೇ ಹುದ್ದೆಯಲ್ಲಿ ಕಾರ್ಯ ನಿರ್ವಹಣೆಯಿಂದ ಬಿಬಿಎಂಪಿಗೆ ಪ್ರತಿ ತಿಂಗಳ ಲಕ್ಷ ಲಕ್ಷ ಹೊರೆ ಆಗುತ್ತಿತ್ತು. ಅಪರ ಆಯುಕ್ತರ ಸಂಬಳ ತಿಂಗಳಿಗೆ 1,23,000 ರೂ ಹಾಗೂ ಸಹಾಕರ ಕಚೇರಿ ನಿರ್ವಹಣ ವೆಚ್ಚ ಬೇರೆ. ಇದರಿಂದ ಪಾಲಿಕೆಗೆ ವರ್ಷಕ್ಕೆ 15 ಲಕ್ಷ ಆರ್ಥಿಕ ಹೊರೆಯಾಗಿತ್ತು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಬುಧವಾರ ವಿಸ್ತ್ರುತ ವರದಿ ಪ್ರಕಟಿಸಿತ್ತು.
PublicNext
06/05/2022 06:10 pm