ಬೆಂಗಳೂರು: ಹೆದ್ದಾರಿಯಲ್ಲಿ ಸರಕು ಸಾಗಣೆ ವಾಹನದ ಮೂಲಕ ಕಸಾಯಿ ಖಾನೆಗೆ ಸಾಗಿಸಲಾಗುತ್ತಿದ್ದ ಹಸು, ಎಮ್ಮೆಗಳನ್ನು ರಕ್ಷಿಸಲಾಗಿದೆ. ಈ ಘಟನೆ ಬೆಂ.ಉತ್ತರ ತಾಲ್ಲೂಕು ತುಮಕೂರು ರಸ್ತೆಯ ಮಾದಾವರದ ಬಳಿ ನೆಡೆದಿದೆ.
ಯಾವುದೇ ದಾಖಲಾತಿಗಳಿಲ್ಲದೆ ಹೊಳೆನರಸೀಪುರದಿಂದ ಹೊಸೂರಿಗೆ ಸರಕು ಸಾಗಾಟ ವಾಹನದಲ್ಲಿ 5 ಹಸು, 3 ಎಮ್ಮೆಗಳನ್ನ ಸಾಗಾಟವಾಗ್ತಿದ್ದು, ಅನುಮಾನಗೊಂಡ ಸಚಿನ್ ಎಂಬುವರು ವಾಹನ ತಡೆದು ಪರೀಕ್ಷಿಸಲು ಗಾಳಿ ನೀರು ಬೆಳಕಿಲ್ಲದೆ, ಹಿಂಸಿಸುವ ರೀತಿಯಲ್ಲಿ ಕಸಾಯಿಖಾನೆಗೆ ರಫ್ತಾಗುತ್ತಿರುವುದು ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಸ್ಥಳಕ್ಕೆ ಧಾವಿಸಿದ ಮಾದನಾಯಕನಹಳ್ಳಿ ಠಾಣಾ ಪೊಲೀಸ್ರು ವಾಹನ ಸಹಿತ ಚಾಲಕ ಮತ್ತು ಕ್ಲೀನರ್‌ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಹಾಗೂ ರಕ್ಷಿಸಿದ ಹಸು ಮತ್ತು ಎಮ್ಮೆಗಳನ್ನ ಸ್ಥಳೀಯ ಗೋಶಾಲೆಗೆ ರವಾನಿಸಿ ಸಂರಕ್ಷಿಸಿದ್ದಾರೆ.
Kshetra Samachara
06/05/2022 12:24 pm