ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮಿತಿ ಮಿರುತ್ತಿದೆ. ವ್ಹೀಲಿಂಗ್ ಅಪಾಯಕಾರಿ ಎಂದು ಸಂಚಾರಿ ಪೊಲೀಸರು ಅದೇಷ್ಟೇ ಜಾಗೃತಿ ಮೂಡಿಸುತ್ತಿದ್ದರು ಚಿಗುರು ಮೀಸೆಯ ಹುಡುಗರ ವ್ಹೀಲಿಂಗ್ ಶೋಕಿ ಮಾತ್ರ ನಿಂತಿಲ್ಲ.
ಇತ್ತೀಚೆಗೆ ನಗರದ ವಿವಿಪುರಂ ಬಳಿಯ ಕಿಮ್ಸ್ ಕಾಲೇಜ್ ಮುಖ್ಯ ರಸ್ತೆಯಲ್ಲೇ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಿಗೆ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ವಿಲ್ಹೀಂಗ್ ವೇಳೆ ಕೊಂಚ ಯಾಮಾರಿದರೂ ಅಪಾಯ ಗ್ಯಾರಂಟಿ. ಅಲ್ಲದೆ ಬೇರೆ ವಾಹನ ಸವಾರರ ಜೀವಕ್ಕೆ ಕುತ್ತು. ಈ ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಪುಂಡರನ್ನು ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
PublicNext
05/05/2022 07:20 pm