ನೆಲಮಂಗಲ : ಹೆದ್ದಾರಿಯಲ್ಲಿ ದರೋಡೆಗೆ ಸಂಚು ರೂಪಿಸಿ ಹೊಂಚು ಹಾಕುತ್ತಿದ್ದ ಆರು ಮಂದಿ ದರೋಡೆಕೋರರ ಪೈಕಿ, ಓರ್ವ ಬಾಲಾಪರಾಧಿ ಸೇರಿದಂತೆ ಐವರು ದರೋಡೆಕೋರರನ್ನ ನೆಲಮಂಗಲ ಟೌನ್ ಪೊಲೀಸ್ರು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ..
ನೆಲಮಂಗಲದ ತುಮಕೂರು ರಸ್ತೆ ದಾನೋಜಿಪಾಳ್ಯದ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಅಜಯ್ (19), ಬಸವ ಪ್ರಭು (20), ಅರುಣ್ (22), ಸಂಜಯ್ (18) ಎಂಬ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರು ಕೃತ್ಯಕ್ಕೆ ಬಳಸುತ್ತಿದ್ದ ಚಾಕು, ದೊಣ್ಣೆ, ಖಾರದ ಪುಡಿ, 6 ಮೊಬೈಲ್ ಸೇರಿದಂತೆ ಎರಡು ಬೈಕ್ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.
ಅಲ್ಲದೆ ತಲೆಮರೆಸಿಕೊಂಡ ಆರೋಪಿ ವೇಣು ಎಂಬಾತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸದ್ಯ ಬಂಧಿತ ಆರೋಪಿಗಳನ್ನ ಮುದ್ದೆ ಮುರಿಯಲು ಜೈಲಿಗಟ್ಟಿದ್ದಾರೆ.
Kshetra Samachara
05/05/2022 03:23 pm