ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ಹಾಕಿ ಪರಾರಿಯಾಗಿರುವ ಆ್ಯಸಿಡ್ ನಾಗೇಶನ ಮೇಲೆ ಕುಟುಂಬದವರು ಹಿಡಿಶಾಪ ಹಾಕಿದ್ದಾರೆ.
ಅವನು ಏನಾದರು ಆಗಲಿ. ನಮಗೂ ಅವನಿಗೂ ಸಂಬಂಧ ಇಲ್ಲ ಎಂದು ನಾಗೇಶನ ಬಾವ ಕೃಷ್ಣಪ್ಪ ಕಣ್ಣೀರಿಟ್ಟಿದ್ದಾರೆ. ಅವನಿಂದ ನಮ್ಮೆಲ್ಲರಿಗೂ ತೊಂದರೆ ಆಗಿದೆ. ಅವನು ನಮ್ಮ ಮನೆಗೆ ಬರ್ತಾನೆ ಇರಲಿಲ್ಲ. ಈಗ ದಿನ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದೇವೆ. ಅವನು ಅಪ್ಪ-ಅಮ್ಮನ ಜೊತೆ ಒಬ್ಬನೆ ವಾಸವಿದ್ದ. ನಮ್ಮ ಮನೆಗೆ ಅವನು ಬರ್ತಾ ಇರಲಿಲ್ಲ. ನಾನು ಅವರ ಅಕ್ಕನನ್ನ ಮದುವೆಯಾಗಿದ್ದೀನಿ. ಅವರ ಮನೆಯಿಂದ ಮದುವೆಯಾಗಿದ್ದೆ ತಪ್ಪಾಗಿ ಹೋಗಿದೆ. ನಮ್ಮ ಮನೆಯಲ್ಲಿ ನಾವು ಇದ್ದೀವಿ ಎಂದು ಕಣ್ಣೀರಿಟ್ಟಿದ್ದಾರೆ. ನೀಚ ಕೆಲಸಕ್ಕಾಗಿ ಗಾರ್ಮೆಂಟ್ಸ್ ಮಾರಿಬಿಟ್ಟ. ಊರಲ್ಲಿ ಜಮೀನು ಮಾರಿದ್ದ. ನಮಗೆ ಸಾಕಾಗಿ ಹೋಗಿದೆ ಎಂದು ನಾಗೇಶನ ಬಾವ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
PublicNext
05/05/2022 02:25 pm