ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲವ್ ಮಾಡಿ ಮದ್ವೆಯಾದ ಗಂಡ ಡ್ರಗ್ಸ್ ವ್ಯಸನಿ- ಪತಿಯ ವಿಕೃತ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ

ದೊಡ್ಡಬಳ್ಳಾಪುರ: ಕಾಲೇಜ್‌ನಲ್ಲಿ ಇಬ್ಬರು ಕ್ಲಾಸ್ ಮೇಟ್ಸ್. ನೋಡು ನೋಡುತ್ತಲೇ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಜಾತಿಗಳು ಬೇರೆಯಾದ್ರು ಎರಡು ಕುಟುಂಬವರು ಒಪ್ಪಿ ಮದುವೆ ಮಾಡಿದರು. ಆದರೆ ಕೈ ಹಿಡಿದ ಪ್ರಿಯಕರ ಮದ್ಯ ವ್ಯಸನಿಯಾಗಿದ್ದ, ಗಂಡನ ವಿಕೃತ ಕಿರುಕುಳಕ್ಕೆ ಬೇಸತ್ತ ಹೆಂಡತಿ ನೇಣಿಗೆ ಶರಣಾಗಿದ್ದಾಳೆ.

ಮದುವೆಯಾಗಿ ಒಂದು ವರ್ಷ ಒಂದು ತಿಂಗಳಾಷ್ಟೇ. ಅಷ್ಟರಲ್ಲೇ ದಾಂಪತ್ಯ ಜೀವನದಲ್ಲಿ ನರಕ ದರ್ಶನ ಮಾಡಿದ್ಳು ಈ ಪಾಪದ ಹುಡುಗಿ ವಂದನಾ, 25 ವರ್ಷದ ವಂದನಾ ಅತ್ತೆ ಮತ್ತು ಗಂಡನ ಕಿರುಕುಳಕ್ಕೆ ಬೇಸತ್ತು ತಾಯಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ದೊಡ್ಡಬಳ್ಳಾಪುರ ನಗರದ ತ್ಯಾಗರಾಜನಗರ ಅನುಸೂಯಮ್ಮನವರ ಮಗಳೇ ಈ ವಂದನಾ, ಕೊಂಗಾಡಿಯಪ್ಪ ಕಾಲೇಜ್‌ನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಕ್ಲಾಸ್ ಮೇಟ್ ಗೌತಮ್ ನಡುವೆ ಪ್ರೇಮಾಂಕುರವಾಗಿತ್ತು. 5 ವರ್ಷಗಳ ಪ್ರೇಮದ ಸುತ್ತಾಟದ ನಂತರ ಮದುವೆ ಬಂಧನಕ್ಕೆ ಒಳಗಾಗಿದ್ದರು. ಇಬ್ಬರ ಜಾತಿಗಳು ಬೇರೆ ಬೇರೆಯಾಗಿದ್ರು, ಎರಡು ಕುಟುಂಬಗಳು ಒಪ್ಪಿ ಮದುವೆ ಮಾಡಿದ್ರು. ಕಾಲೇಜ್ ನಲ್ಲಿ ಇರುವಾಗಲೇ ಧೂಮಪಾನಿಯಾಗಿದ್ದ ಗೌತಮ್ ಮದುವೆ ನಂತರ ಬದಲಾಯಿಸ್ತಿನಿ ಎಂಬ ನಂಬಿಕೆಯಲ್ಲಿ ಗೌತಮ್ ಜೊತೆ ಸಪ್ತಪದಿ ತುಳಿದ್ಳು, ಆದರೇ ಆತ ಡ್ರಗ್ಸ್ ಚಟಕ್ಕೆ ದಾಸನಾಗಿದ್ದ, ನಶೆಯಲ್ಲಿ ಇಡೀ ರಾತ್ರಿ ವಂದನಾಗೆ ಕಿರುಕುಳ ನೀಡುತ್ತಿದ್ದ, ಗಂಡನ ವಿಕೃತ ಕಿರುಕುಳಕ್ಕೆ ಬೇಸತ್ತ ವಂದನಾ ಇಂದು ಬೆಳಗ್ಗೆ ತಾಯಿ ಮನೆಯಲ್ಲಿ ನೇಣಿಗೆ ಶರಣಾಗಿ ಬಿಟ್ಳು.

.Msc ಪದವಿಧರೆಯಾಗಿದ್ದ ವಂದನಾ ಖಾಸಗಿ ಕಂಪನಿಯಲ್ಲಿ ಕೈತುಂಬಾ ಸಂಬಳ ಪಡೆಯುತ್ತಿದ್ದಳು. ಆದರೆ ಗೌತಮ್‌ಗೆ ಬರುತ್ತಿದ್ದೇ ತಿಂಗಳಿಗೆ 12 ಸಾವಿರ ಸಂಬಳ, ಆತನ ದುಶ್ಚಟಗಳಿಗೆ 12 ಸಾವಿರ ರೂ. ಸಾಲುತ್ತಿರಲಿಲ್ಲ. ಡ್ರಗ್ಸ್ ಸೇವನೆಗೂ ಹೆಂಡತಿಯಿಂದ ಹಣ ಕಿಳುತ್ತಿದ್ದ, ಡ್ರಗ್ಸ್ ನಶೆಯಲ್ಲಿ ಇಡೀ ರಾತ್ರಿ ಕಿರುಕುಳ ನೀಡುತ್ತಿದ್ದ, ಸಿಗರೇಟ್ ನಿಂದ ವಂದನಾ ಕೆನ್ನೆಯನ್ನು ಸುಟ್ಟಿದ್ದ. ಮದುವೆ ಖರ್ಚಿಗಾಗಿ ಎರಡು ಲಕ್ಷ ಹಣವನ್ನ ವಂದನಾ ಬಳಿಯಿಂದ ಪಡೆದಿದ್ದ, ಎರಡು ತಿಂಗಳ ಹಿಂದೆ ಹಣ ಕೋಡದಿದ್ದಾಗ ಲ್ಯಾಪ್ ಟಾಪ್ ಹೊಡೆದು ಹಾಕಿದ, ಇದರಿಂದ ಬೇಸತ್ತ ವಂದನಾ ತವರು ಮನೆಗೆ ಬಂದಿದ್ಳು, ತವರು ಮನೆಯಲ್ಲಿದ್ರು ಮೇಸೆಜ್ ಮಾಡಿ ಕಿರುಕುಳ ನೀಡುತ್ತಿದ್ದ, ಗಂಡನ ಕಿರುಕುಳಕ್ಕೆ ಬೇಸತ್ತು ಗಂಡನ ವಿರುದ್ಧ ದೂರು ಸಿದ್ದತೆ ಮಾಡಿಕೊಂಡಿದ್ದ ವಂದನಾ ಸೈಬರ್ ಸೆಂಟರ್ ನಲ್ಲಿ ದೂರು ಪ್ರತಿಯನ್ನ ಟೈಪ್ ಮಾಡಿಸಿದ್ದಳು. ಅದನ್ನು ಪೊಲೀಸ್ ಠಾಣೆಗೆ ಕೊಡುವ ಬದಲಿಗೆ ಇಂದು ಬೆಳಿಗ್ಗೆ 11 :30 ಸಮಯದಲ್ಲಿ ಮನೆಯ ರೂಮ್ ಒಂದಲ್ಲಿ ಫ್ಯಾನ್ ನೇಣು ಹಾಕೊಂಡು ಸಾವನ್ನಪ್ಪಿದ್ದಾಳೆ. ತಹಶೀಲ್ದಾರ್ ಮೋಹನಕುಮಾರಿ ಸಮ್ಮುಖದಲ್ಲಿ ಮೃತಳ ಶವಪರೀಕ್ಷೆ ಮಾಡಿಸಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಹೇಗೆಲ್ಲ ಬದುಕ ಬೇಕೆಂಬ ಸುಂದರ ಕನಸು ಕಂಡಿದ್ದ ವಂದನಾಳನ್ನ ಗಂಡನ ಡ್ರಗ್ಸ್ ವ್ಯಸನ ಬಲಿ ಪಡೆದಿದೆ, ಹೆಂಡತಿ ಹಣದಲ್ಲಿ ದುಶ್ಚಟಗಳ ದಾಸನಾಗಿದ್ದ ಗೌತಮ್‌ಗೆ ತಕ್ಕ ಶಾಸ್ತಿಯಾಗಲೇ ಬೇಕು.

Edited By : Shivu K
PublicNext

PublicNext

04/05/2022 08:12 am

Cinque Terre

42.56 K

Cinque Terre

7

ಸಂಬಂಧಿತ ಸುದ್ದಿ