ಬೆಂಗಳೂರು: ಯುವತಿಯರೇ, ಎಚ್ಚರೆಚ್ಚರ... ನೀವೇನಾದರೂ ಜಿಮ್ ಗೆ ಹೋಗ್ತಾ ಇದ್ದೀರಾ? ಹಾಗಾದರೆ ನೀವು ಈ ಸ್ಟೋರಿನ ತಿಳಿಯಲೇಬೇಕು. ಮುಂಬೈನಿಂದ ಹೊಸ ಕನಸಿನೊಂದಿಗೆ ಬೆಂಗಳೂರಿಗೆ ಬಂದ ಯುವತಿಯೊಬ್ಬಳು ಬಾಣಸವಾಡಿಯ ಖಾಸಗಿ ಜಿಮ್ ಗೆ ಸೇರುತ್ತಾರೆ.
ಈತನ ಹೆಸರು ಸೈಯದ್ ಸಿದ್ದಿಕ್. ಈತ ಖಾಸಗಿ ಜಿಮ್ ಟ್ರೈನರ್. ಫಿಟ್ನೆಸ್ ನಲ್ಲಿ ಅದೆನೋ ʼಸಾಧನೆʼ ಮಾಡಿದ್ದಾನಂತೆ. ಇದನ್ನು ನಂಬಿದ ಯುವತಿ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಯುವತಿ ತಾನೂ ಕೂಡ ಉತ್ತಮ ಬಾಡಿ ಬಿಲ್ಡರ್ ಆಗುವ ಆಸೆಯಿಟ್ಟುಕೊಂಡೇ ಬೆಂಗಳೂರಿಗೆ ಬಂದಿದ್ದರು. ಆದರೆ, ಈ ಕಾಮುಕ ಜಿಮ್ ಟ್ರೈನರ್ ಯುವತಿಯ ಆ ಎಲ್ಲಾ ಕನಸು-ನಿರೀಕ್ಷೆಯನ್ನು ನುಚ್ಚುನೂರು ಮಾಡಿದ್ದಾನೆ!
ತನಗೆ ಡ್ರಗ್ಸ್ ನೀಡಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿರುವ ಯುವತಿ, ನಂತರ ಮದುವೆ ಮಾಡಿಕೊಳ್ಳುತ್ತೇನೆಂದು ಹೇಳಿ ಮೋಸ ಮಾಡಿದ್ದಾನೆ ಎಂದು ದೂರಿದ್ದಾಳೆ. ಈ ಸಂತ್ರಸ್ತ ಯುವತಿಯು ಆ ಕರಾಳ ಘಟನೆಯ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ನವೀನ್ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
ಈ ನತದೃಷ್ಟೆ ಯುವತಿ ಕಾಡುಗುಡ್ಡನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕಂಪ್ಲೇಂಟ್ ಸಹ ದಾಖಲಿಸಿದ್ದಾರೆ. ಪೊಲೀಸರು ಕಾಮುಕ ಜಿಮ್ ಟ್ರೈನರ್ ಸೈಯದ್ ಸಿದ್ದಿಕ್ ನನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
03/05/2022 09:18 pm