ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಲ ತೀರಿಸಲು ವೃದ್ಧೆ ತಲೆ ಒಡೆದಿದ್ದ ಆರೋಪಿ ಭದ್ರಾವತಿಯಲ್ಲಿ ನೇಣಿಗೆ ಶರಣು

ಬೆಂಗಳೂರು: ಆತ ಕೋಟಿ ಕೋಟಿ ಒಡೆಯ ಆದ್ರೆ, ಐಪಿಎಲ್ ಇಸ್ಫೀಟ್ ಹುಚ್ಚಿಗೆ ಬಿದ್ದು ಕೋಟಿ ಕೋಟಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಹೆಂಡತಿ ಒಡವೆಗಳನ್ನು ಅಡವಿಟ್ಟಿದ್ದ. ಒಂದು ಕಡೆ ಸಾಲಗಾರರ ಕಾಟ ಇನ್ನೊಂದು ಕಡೆ ಒಡವೆ ಬಿಡಿಸಿ ಕೊಡಿ ಅಂತ ಹೆಂಡತಿ ಟಾರ್ಚರ್ ಇದ್ರಿಂದ ತಪ್ಪಿಸಿಕೊಳ್ಳಲು ವೃದ್ಧೆಯ ತಲೆ ಒಡೆದು ಚಿನ್ನದ ಸರ ಕಿತ್ತು ಪರಾರಿಯಾಗಿದ್ದ.

ಈ ರೀತಿ ಪರಾರಿಯಾದವನು ಭದ್ರವತಿಯಲ್ಲಿ ನೇಣಿಗೆ ಶರಣಾಗಿದ್ದಾನೆ.ಹೌದು ಏ. 20 ರಂದು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ವಿದ್ಯಾಮಾನ ನಗರದಲ್ಲಿ ಬಾಡಿಗೆ ಕೇಳೋ ನೆಪದಲ್ಲಿ ವೃದ್ಧೆಗೆ ಸ್ಪಾನರ್ ನಿಂದ ಹೊಡೆದು 48ಗ್ರಾಂ ಚಿನ್ನದ ಸರ ಕಿತ್ತು ರಾಜೇಂದ್ರ ಎಂಬಾತ ಪರಾರಿಯಾಗಿದ್ದ.

ಈ ಕುರಿತು ಕೇಸ್ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸ್ರು ಆರೋಪಿ ರಾಜೇಂದ್ರನನ್ನ ಹಿಡಿಯಲು ವಿಶೇಷ ತಂಡ ರಚನೆ ಮಾಡಿ ತನಿಖೆ ಶುರು ಮಾಡಿದ್ರು. ಈ ಮದ್ಯೆ ಆರೋಪಿ ರಾಜೇಂದ್ರ ಭದ್ರಾವತಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಒಂದು ಕಡೆ ಪೊಲೀಸ್ರ ಭಯ ಇನ್ನೊಂದು ಕಡೆ ಮರ್ಯಾದೆ ಈ ಎರಡಕ್ಕೂ ಹೆದರಿ ರಾಜೇಂದ್ರ ನೇಣಿಗೆ ಶರಣಾಗಿರೋ ಸಾಧ್ಯತೆಯಿದೆ ಎಂದು ಪೊಲೀಸ್ರು ಅನುಮಾನಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

01/05/2022 10:53 pm

Cinque Terre

4.24 K

Cinque Terre

0

ಸಂಬಂಧಿತ ಸುದ್ದಿ