ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರೀತ್ಸೆ ಪ್ರೀತ್ಸೆ ಅಂತ ಹಿಂಸೆ ಕೊಟ್ಟು ಆ್ಯಸಿಡ್ ದಾಳಿ ನಡೆಸಿಬಿಟ್ಟ; ಕಣ್ಣೀರಿಟ್ಟ ಯುವತಿ

ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ಪ್ರಕರಣ ಸಂಬಂಧ ದಾಳಿಗೊಳಗಾದ ಯುವತಿ ಪೊಲೀಸರಿಗೆ ಮುಂದೆ ಕಣ್ಣೀರ ಹೇಳಿಕೆ ನೀಡಿದ್ದಾಳೆ. ಪಬ್ಲಿಕ್ ನೆಕ್ಸ್ಟ್‌ಗೆ ಯುವತಿಯ ಸ್ಟೇಟ್‌ಮೆಂಟ್ ಲಭ್ಯವಾಗಿದೆ. ಆ್ಯಸಿಡ್‌ನಿಂದ ದಾಳಿಗೊಳಗಾಗಿದ್ದರೂ ಯುವತಿ ನೀಡಿರುವ ಹೇಳಿಕೆ ಆಧಾರಿತವಾಗಿ ಕಾಮಾಕ್ಷಿಪಾಳ್ಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಸ್ಟೇಟ್ ಮೆಂಟ್

ದಿನಾಂಕ - 28-04-2022

ಹೇಳಿಕೆ - ಆ್ಯಸಿಡ್ ದಾಳಿಗೊಳಗಾದ ಯುವತಿ, ಹೆಗ್ಗನಹಳ್ಳಿ ಕ್ರಾಸ್ , ಬೆಂಗಳೂರು

....ನಾನು ಈ ಮೇಲಿನ ವಿಳಾಸದ ಮನೆಯಲ್ಲಿ ತಂದೆ ತಾಯಿ ಹಾಗು ಸಹೋದರ, ಸಹೋದರಿಯೊಂದಿಗೆ ವಾಸವಾಗಿದ್ದುಕೊಂಡು, ಸುಂಕದಕಟ್ಟೆಯ ಮುತ್ತೂಟ್ ಮಿನಿ ಫೈನಾನ್ಸ್ ಕಂಪನಿಯಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ನನ್ನ ತಂದೆ ರಾಜು ಮನೆಯ ಹತ್ತಿರ ತರಕಾರಿ ಅಂಗಡಿಯನ್ನ ಇಟ್ಟುಕೊಂಡಿರುತ್ತಾರೆ. ತಾಯಿ ಲಕ್ಷ್ಮಮ್ಮ ಇವರು ಗೃಹಿಣಿಯಾಗಿರುತ್ತಾರೆ. ನಮ್ಮ ತಂದೆ-ತಾಯಿಗೆ ನಾವುಗಳು ಮೂರು ಜನ ಮಕ್ಕಳು.

ದೊಡ್ಡವಳು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿರುತ್ತಾಳೆ. ನಾನು ಮಧ್ಯದವಳು. ಕೊನೆಯವನು ನನ್ನ ತಮ್ಮ ವಿಶ್ವಾಸ್ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಮನೆಯಲ್ಲಿಯೇ ಇರುತ್ತಾನೆ. ಈ ದಿವಸ ಬೆಳಗ್ಗೆ 8-30 ಗಂಟೆಗೆ ನನ್ನ ತಂದೆ ನನ್ನನ್ನ ಸುಂಕದಕಟ್ಟೆಯ ಮುತ್ತೂಟ್ ಮಿನಿ‌ ಫೈನಾನ್ಸ್ ಕಚೇರಿಗೆ ಡ್ರಾಪ್ ಮಾಡಿದ್ದು, ನಾನು ಮೊದಲನೇ ಮಹಡಿಯಲ್ಲಿದ್ದ ಕಚೇರಿಗೆ, ಮೆಟ್ಟಿಲು ಹತ್ತಿಕೊಂಡು ಹೋಗಿ, ಕಚೇರಿಗೆ ಯಾರು ಬಾರದೆ ಇಲ್ಲದ್ದರಿಂದ ನಾನು ಕಚೇರಿ ಬಾಗಿಲ ಹತ್ತಿರ ನಿಂತುಕೊಂಡಿದ್ದಾಗ, ನಾಗೇಶ ಎಂಬುವನು ಬಂದು ಆತನ ಕೈಯಲ್ಲಿ, ಏನನ್ನೊ ಕವರ್ ನಲ್ಲಿ ಹಿಡಿದುಕೊಂಡು ಬಂದಿದ್ದು, ನಾನು ಆತನನ್ನು ನೋಡಿ ಅಲ್ಲಿ ಕೆಳಗೆ ಓಡಲು ಪ್ರಯತ್ನಿಸಿದ್ದು, ಕೂಡಲೆ ನಾಗೇಶ ನನ್ನನ್ನ ಹಿಂಬಾಲಿಸಿಕೊಂಡು ಬಂದು ತನ್ನ ಕೈಯಲ್ಲಿದ್ದ ಯಾವುದೋ ಆಸಿಡ್ಅನ್ನು ನನ್ನ ಮೈ ಮೇಲೆ ಹಾಕಿ ಓಡಿ ಹೋಗಿರುತ್ತಾನೆ.

ಆಗ ನನ್ನ ಮುಂಭಾಗದ ಎದೆ, ಕೈಗಳು , ಹಾಗು ಬೆನ್ನಿಗೆ ಆಸಿಡ್ ಬಿದ್ದು ಗಾಯಗಳಾಗಿವೆ. ನಾನು ನಮ್ಮ ತಂದೆಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದು, ನಮ್ಮ ತಂದೆ ಸ್ಥಳಕ್ಕೆ ಬಂದು ನನ್ನನ್ನು ಆಂಬುಲೆನ್ಸ್‌ನಲ್ಲಿ ಲಕ್ಷ್ಮಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ನಾಗೇಶ ಸುಮಾರು ಏಳು ವರ್ಷಗಳ ಹಿಂದೆ ನಮ್ಮ ದೊಡ್ಡಮ್ಮನ ಮನೆಯಲ್ಲಿ ಬಾಡಿಗೆಗೆ ಇದ್ದು, ಆತನು ನನ್ನನ್ನು ಪ್ರೀತಿ ಮಾಡುವಂತೆ ಹಿಂಸೆ ಮಾಡುತ್ತಿದ್ದ. ನಂತರ ನಾನು ಪ್ರೀತಿ ಮಾಡುವುದಿಲ್ಲ ಎಂದು ತಿಳಿಸಿದಾಗ ಆತನು ಸುಮ್ಮನಿದ್ದು, ಒಂದು ವಾರದಿಂದ ನನ್ನನ್ನು ಮತ್ತೆ ಹಿಂಬಾಲಿಸಿಕೊಂಡು ಬಂದು, ಪ್ರೀತಿ ಮಾಡುವಂತೆ ಬಲವಂತ ಮಾಡುತ್ತಿದ್ದ.

ನಿನ್ನೆ ದಿನಾಂಕ ೨೭-೦೪-೨೦೨೨ ರಂದು ಬೆಳಗ್ಗೆ ಸುಮಾರು ೯ ಗಂಟೆಗೆ ನಾಗೇಶ ನನ್ನ ಹಿಂಬಾಲಿಸಿಕೊಂಡು ಮುತ್ತೂಟ್ ಫೈನಾನ್ಸ್ ಗೆ ಬಂದಿದ್ದು, ನೀನು ನನ್ನ ಪ್ರೀತಿಸಿ ಮದುವೆಯಾಗಲೇಬೇಕು. ಇಲ್ಲದಿದ್ದ ಪಕ್ಷದಲ್ಲಿ ನೀನು ಯಾರಿಗೂ ಸಿಗದಂತೆ ಮಾಡುತ್ತೇನೆಂದು ಧಮ್ಕಿ ಹಾಕಿ ನಂತ್ರ ನಮ್ಮ ಫೈನಾನ್ಸ್‌ನ ಮ್ಯಾನೇಜರ್ ರವರಿಗೆ, ಅವಳಿಗೆ ಏನು ಮಾಡುತ್ತೇನೆ ನೋಡಿ ಎಂದು ಹೇಳಿ ಹೋಗಿದ್ದನು. ನಾನು ಈ ವಿಚಾರವನ್ನು ನಾನು ನನ್ನ ದೊಡ್ಡಮ್ಮನಿಗೆ ತಿಳಿಸಿದ್ದು, ನಿನ್ನೆ ನನ್ನ ದೊಡ್ಡಮ್ಮ ನಾಗೇಶನ ಅಣ್ಣನನ್ನು ಕರೆಸಿ ವಿಚಾರವನ್ನು ತಿಳಿಸಿದ್ದು, ಅವರು ಆತನಿಗೆ ಬುದ್ಧಿವಾದ ಹೇಳುತ್ತೇನೆಂದು ಕಳುಹಿಸಿದರು. ಆದರೆ ಈ ದಿವಸ ನಾಗೇಶ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಆಸಿಡ್ ತೆಗೆದುಕೊಂಡು ಬಂದು ನನ್ನನ್ನು ಅಡ್ಡಗಟ್ಟಿ ಆಸಿಡ್ ದಾಳಿ ಮಾಡಿ, ಮಾರಣಾಂತಿಕ ಗಾಯವಾಗಿರುತ್ತದೆ. ಆದ್ದರಿಂದ ಸದರಿ ನಾಗೇಶನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ.

Edited By : Manjunath H D
PublicNext

PublicNext

30/04/2022 03:36 pm

Cinque Terre

31.34 K

Cinque Terre

0

ಸಂಬಂಧಿತ ಸುದ್ದಿ