ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್‌ : ಮನೆಗೇ ನುಗ್ಗಿ ಬೋರ್ ವೆಲ್ ಕೇಬಲ್ ವೈರ್ ಎಗರಿಸಿದ!; ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ

ಆನೇಕಲ್ : ಮನೆಗೇ ನುಗ್ಗಿ ಬೋರ್ ವೆಲ್ ಗಾಗಿ ಅಳವಡಿಸಿದ್ದ ಕೇಬಲ್ ವೈರ್ ನ್ನು ಕದ್ದು ಪರಾರಿಯಾಗಿರುವ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ಲೇಔಟ್ ಬಳಿ ನಡೆದಿದೆ. ಕೇಬಲ್ ವೈರ್ ಕದ್ದು ಖದೀಮ ಪರಾರಿಯಾಗುತ್ತಿರುವ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ಲೇಔಟ್ ನಲ್ಲಿ ಕೆಲ ದಿನಗಳ ಹಿಂದೆ ಮುರಳಿ ಎಂಬವರ ಮನೆಯಲ್ಲಿ ಬೋರ್ ವೆಲ್ ನ ಕೇಬಲ್ ವೈರ್ ಅಳವಡಿಕೆ ಮಾಡಲಾಗಿತ್ತು.

ಕಳ್ಳನೊಬ್ಬ ಮುಂಜಾವ 3 ಗಂಟೆ ಸುಮಾರಿಗೆ ಮನೆಗೆ ನುಗ್ಗಿ ಬೋರ್ ವೆಲ್ ಕೇಬಲ್ ವೈರ್ ಕದ್ದು ಎಸ್ಕೇಪ್ ಆಗಿದ್ದಾನೆ. ಇನ್ನು, ಕಳ್ಳನ ಕೈಚಳಕದ ಚಿತ್ರಣ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕಳವಿನ ದೃಶ್ಯಾವಳಿ 'ಪಬ್ಲಿಕ್ ನೆಕ್ಸ್ಟ್' ಗೂ ಲಭ್ಯವಾಗಿದೆ.

Edited By : Shivu K
Kshetra Samachara

Kshetra Samachara

29/04/2022 09:44 pm

Cinque Terre

6.22 K

Cinque Terre

0

ಸಂಬಂಧಿತ ಸುದ್ದಿ