ಬೆಂಗಳೂರು: ಆ್ಯಸಿಡ್ ದಾಳಿಗೊಳಗಾದ ಯುವತಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಯುವತಿ ಪೋಷಕರು ಮಾಹಿತಿ ನೀಡಿದ್ದಾರೆ. ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಯುವತಿ ಕೇವಲ ಸನ್ನೆ ಮೂಲಕ ಮಾತ್ರ ಮಾತನಾಡ್ತಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.
ವೈದ್ಯರು ಪ್ರಯತ್ನ ಪಡ್ತಿದ್ದಾರೆ. ದೇಹದ ತಲೆ, ಬೆನ್ನು ಮತ್ತು ಎದೆ ಭಾಗಕ್ಕೆ ಆ್ಯಸಿಡ್ ಗಾಯಗಳಾಗಿದ್ದು, ಶೇಕಡ 40-50 % ಬರ್ನ್ ಆಗಿದೆ ಎಂದು ಯುವತಿ ತಾತ ರಾಮು ತಿಳಿಸಿದ್ದಾರೆ.
ಇನ್ನು ಕಮಕ್ಚಿಪಾಳ್ಯ ಠಾಣೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ತನಿಖೆಯ ಮಾಹಿತಿ ಪಡೆಯುತ್ತಿದ್ದಾರೆ.ನಿನ್ನೆ ಮೂರು ತಂಡಗಳಿದ್ದ ತನಿಖಾ ತಂಡವನ್ನು ಐದು ತಂಡಗಳಿಗೆ ಈಗ ಏರಿಸಲಾಗಿದೆ.
PublicNext
29/04/2022 12:45 pm