ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೈದರಾಬಾದ್ ನಿಂದ‌ ಬಂದು ಕಳ್ಳತನ : ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಅರೆಸ್ಟ್…

ಬೆಂಗಳೂರು: ಹೈದರಾಬಾದ್ ನಿಂದ ನಗರದ ಅಪಾರ್ಟ್ ಮೆಂಟ್ ಗೆ ಶಿಫ್ಟ್ ಆಗಿ ನಾಲ್ಕು ದಿನದಲ್ಲೇ ಫ್ಲ್ಯಾಟ್ ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಗ-ನಾಣ್ಯ ದೋಚಿ ಪರಾರಿಯಾಗಿದ್ದ ಬಿಹಾರ ಮೂಲದ‌ ಮೂವರು ಖದೀಮರನ್ನು ಕೆಲವೇ ಗಂಟೆಗಳಲ್ಲಿ‌ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಬಬೂಲ್ ಪಾಸ್ವಾನ್, ಬೋಲಾ ಪಾಸ್ವಾನ್ ಹಾಗೂ ಶ್ರೀಧರ್ ಪಾಸ್ವಾನ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 1.25 ಕೋಟಿ ಮೌಲ್ಯದ ಡೈಮಂಡ್, ಚಿನ್ನಾಭರಣ ಹಾಗೂ ವಿದೇಶಿ ಕರೆನ್ಸಿ ಜಪ್ತಿ ಮಾಡಿಕೊಂಡಿದ್ದಾರೆ.

ಹೈದರಾಬಾದ್ ‌ನಿವಾಸಿಯೊಬ್ಬರು ಅರೆಕೆರೆ ಬಿಜಿ ರೋಡ್ ನ ರೋಷನ್ ಪ್ಲಾಟಿನಂ ಅಪಾರ್ಟ್ ಮೆಂಟ್ ನಲ್ಲಿ ಫ್ಲ್ಯಾಟ್ ಖರೀದಿಸಿದ್ದರು‌‌. ಏಪ್ರಿಲ್ 24 ರಂದು ಹೊಸ ಮನೆಗೆ ಬಂದಿದ್ದರು. ಈ‌ ವೇಳೆ‌ ಕಳೆದ 8 ವರ್ಷಗಳಿಂದಲೂ ಅಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಆರೋಪಿಗಳು ಹೊಸ ಫ್ಲ್ಯಾಟ್ ನ ಮಾಲೀಕರಿಗೆ ಸಹಾಯ ಮಾಡುವ ನಾಟಕ‌ ಆಡಿದ್ರು. ಕಳ್ಳರನ್ನು ನಂಬಿದ ಮನೆ ಮಾಲಿಕ ಕೆಲಸದ ಸಲುವಾಗಿ ಹೈದರಬಾದ್ ಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತ ಖದೀಮರು ಕಳ್ಳತನಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದರು. 27 ರ ಮಧ್ಯರಾತ್ರಿ ಫ್ಲ್ಯಾಟ್ ಹಿಂಬಾಗಿಲಿನಿಂದ ನುಗ್ಗಿ ಒಂದೂವರೆ ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಅದೇ ದಿನ ರಾತ್ರಿ ಮಾಲೀಕ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವ ಸಂಗತಿ ಗೊತ್ತಾಗಿದೆ. ಕೂಡಲೇ ಹುಳಿಮಾವು ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಖದೀಮರ ಪತ್ತೆಗಾಗಿ ಎಸಿಪಿ‌ ಪವನ್, ಹುಳಿಮಾವು ಇನ್‌ಸ್ಪೆಕ್ಟರ್ ಚಂದ್ರಕಾಂತ್ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಿ ಫೀಲ್ಡ್ ಗಿಳಿದಿದ್ದರು. ಖದೀಮರು ಕಳ್ಳತನ ಮಾಡಿ ಹುಳಿಮಾವಿನಿಂದ‌ ಮೆಜೆಸ್ಟಿಕ್ ಗೆ ಬಂದು ವಾಹನದ ಮುಖಾಂತರ ಕೆಆರ್‌ಪುರ ರೈಲ್ವೇ ಸ್ಟೇಷನ್ ಬಂದಿಳಿರುವುದು ಗೊತ್ತಾಗಿತ್ತು.‌ ಪೊಲೀಸರನ್ನ ದಿಕ್ಕು ತಪ್ಪಿಸಲು ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬಳಿಕ ಅಲ್ಲಿಂದ ಬಂಗಾರಪೇಟೆಗೆ ತೆರಳಿ ಬೇಸಿಕ್ ಮಾದರಿ ಮೊಬೈಲ್ ಆನ್ ಮಾಡಿಕೊಂಡಿದ್ದಾರೆ. ಇದನ್ನು ಕಂಡುಕೊಂಡ ಪೊಲೀಸರು ಮೊಬೈಲ್ ನೆಟ್ ವರ್ಕ್ ಹಾಗೂ ಸೆರೆಯಾಗಿದ್ದ ಸಿಸಿಟಿವಿ ಕ್ಯಾಮೆರಾ ಆಧಾರದ ಮೇಲೆ ಹಿಂಬಾಲಿಸಿ ಆರೋಪಿಗಳನ್ನ ಲಾಕ್ ಮಾಡಿದ್ದಾರೆ.

ಇನ್ನು ಪೊಲೀಸರಲ್ಲಿ ಗೊಂದಲ ಮೂಡಿಸಲು ಅಂದು ಬೆಳಗ್ಗೆ ಬಂಗಾರಪೇಟೆಯಿಂದ ಬಿಹಾರ ಹೋಗುವ ರೈಲು ಹತ್ತದೆ ಮಧ್ಯಾಹ್ನ ಕೊಲ್ಕತ್ತಾ ಹೋಗುವ ರೈಲಿಗೆ ಕಾದು ಕುಳಿತಿದ್ದರು. ಖದೀಮರ ದುರದೃಷ್ಟವಶಾತ್ ಎಂಬಂತೆ ರೈಲು ಎರಡು ಗಂಟೆಗಳ ತಡವಾಗಿದೆ. ಅಷ್ಟೊತ್ತಿಗಾಗಲೇ ರೈಲು ನಿಲ್ದಾಣಕ್ಕೆ ತಲುಪಿ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Edited By : Manjunath H D
PublicNext

PublicNext

28/04/2022 10:04 pm

Cinque Terre

48.19 K

Cinque Terre

1

ಸಂಬಂಧಿತ ಸುದ್ದಿ