ದೊಡ್ಡಬಳ್ಳಾಪುರ: ವೇಲ್ ಎತ್ತಿಕೊಳ್ಳಲು ಹೋಗಿ 6ನೇ ಮಹಡಿಯಿಂದ ಬಿದ್ದು ಉಗಾಂಡ ದೇಶದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ, ಸಹಪಾಠಿಯ ಸಾವಿನಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಾಲೇಜ್‌ನಲ್ಲಿ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿಯ ಗೀತಂ ವಿಶ್ವವಿದ್ಯಾಲಯದದಲ್ಲಿ ನಿನ್ನೆ ರಾತ್ರಿ 8:40ರ ಸಮಯದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಉಗಾಂಡ ಮೂಲ 22 ವರ್ಷದ ಅಗಾಶಾ ಹಸೀನಾ ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿನಿ ಸ್ಟೂಂಡೆಟ್ ವೀಸಾದಾಡಿ ಭಾರತದಲ್ಲಿ ವಿದ್ಯಾಭ್ಯಾಸಕ್ಕೆ ಬಂದಿದ್ದಳು. ಗೀತಂ ವಿಶ್ವವಿದ್ಯಾಲಯದಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ ರಾತ್ರಿ ವೇಲ್ ಎತ್ತಿಕೊಂಡು ಬರಲು ಹೋದ ಆಕೆ 6 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ.
7 ನೇ ಮಹಡಿಯಲ್ಲಿ ಅಗಾಶಾ ಹಸೀನಾ ವಾಸವಾಗಿದ್ದು, ಆಕೆ ಒಣಗಲು ಹಾಕಿದ ಬಟ್ಟೆ 6 ನೇ ಮಹಡಿಗೆ ಬಿದ್ದಿಗೆ, 6ನೇ ಮಹಡಿಯ ಪ್ಯಾಸೇಜ್‌ಗೆ ಮಳೆನೀರು ಕೆಳಗೆ ಹೋಗದಂತೆ ಪ್ಲಾಸ್ಟಿಕ್ ಶೀಟ್ ನ್ನು ಹಾಕಿದ್ದರು, ವೇಲ್ ಶೀಟ್ ಮೇಲೆ ಬಿದ್ದಿದೆ, ಅದನ್ನು ತೆಗೆದು ಕೊಳ್ಳಲು ಅಗಾಶಾ ಹಸೀನಾ ಜಂಪ್ ಮಾಡಿದ್ದಾಳೆ. ಈ ಮೊದಲೇ ತುಕ್ಕು ಹಿಡಿದು ಸವೆದಿದ್ದು ಕಬ್ಬಿಣದ ರಾಡ್ ಮತ್ತು ಶೀಟ್ ಕಳಚಿಕೊಂಡಿದೆ. ಹೀಗಾಗಿ ಆಕೆ ನೇರವಾಗಿ ಕೆಳಗೆ ಬಿದ್ದಿದ್ದಾಳೆ. ಅಲ್ಲಿಯೇ ಇದ್ದ ಸ್ನೇಹಿತೆ ಆಕೆಯ ರಕ್ಷಿಸಲು ಯತ್ನಿಸಿದ್ದಾಳೆ. ಆದರೆ ಆಕೆಯ ತೂಕವನ್ನ ಹಿಡಿಯಲು ಸಾಧ್ಯವಾಗದೆ ಕೈಯಿಂದ ಜಾರಿದ ಹಸೀನಾ ಸೀದಾ ಕೆಳಗೆ ಬಿದ್ದಿದ್ದಾಳೆ. ಗಂಭೀರವಾಗಿ ಗಾಯಾಗೊಂಡಿದ್ದ ಹಸೀನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಸ್ಥಳಕ್ಕೆ ಆಗಮಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನಾ ವಂಶಿಕೃಷ್ಣ ಘಟನಾ ಸ್ಥಳ ಪರಿಶೀಲನೆ ನಡೆಸಿದರು, ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಾಲೇಜ್ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ ಲಿಖಿತವಾಗಿ ಉತ್ತರ ನೀಡುವಂತೆ ಹೇಳಿದ್ದಾರೆ. ಎಂಬಸಿ ಜೊತೆ ಸಂಪರ್ಕದಲ್ಲಿದ್ದು ಆಕೆಯ ಶವವನ್ನು ಉಗಾಂಡ ದೇಶಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
PublicNext
28/04/2022 09:13 pm