ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲವ್ ಮಾಡಲ್ಲ ಎಂದಿದ್ದಕ್ಕೆ ಪಾಗಲ್ ಪ್ರೇಮಿಯಿಂದ ಯುವತಿಗೆ ಆ್ಯಸಿಡ್ ದಾಳಿ

ಬೆಂಗಳೂರು: ನಗರದ ಸುಂಕದಕಟ್ಟೆಯಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಆ್ಯಸಿಡ್ ಎರಚಿ ಎಸ್ಕೇಪ್ ಆಗಿದ್ದಾನೆ. ಸುಂಕದಕಟ್ಟೆಯ ಮುತ್ತೂಟ್ ಫಿನ್‌ಕಾರ್ಪ್‌ನಲ್ಲಿ ಕೆಲಸ‌ಮಾಡ್ತಿದ್ದ ಯುವತಿಗೆ ಆರೋಪಿ ಕಳೆದ ಏಳು ವರ್ಷದಿಂದ ಪರಿಚಯವಿದ್ದ. ಈ ಹಿಂದೆ ಯುವತಿಗೆ ಲವ್ ಪ್ರಪೋಸ್ ಮಾಡಿದ್ದ. ಆದ್ರೆ ನಾಗೇಶನ ಪ್ರೇಮ ನಿವೇದನೆಯನ್ನು ಆಕೆ ನಿರಾಕರಿಸಿದ್ದಾಳೆ. ಈ ವಿಚಾರವಾಗಿ ಕುಟುಂಬಸ್ಥರು ಗಲಾಟೆ ನಡೆಸಿದ್ರು. ಇದಾದ ಬಳಿಕ ಸುಮ್ಮನಿದ್ದ ನಾಗೇಶ ನಿನ್ನೆ ಯುವತಿಯನ್ನ ಮತ್ತೆ ಭೇಟಿ ಮಾಡಿ ಪ್ರೀತಿ ಮಾಡು ಇಲ್ಲದಿದ್ರೆ ಆ್ಯಸಿಡ್ ಹಾಕ್ತಿನಿ ಅಂತ ಗಲಾಟೆ ಮಾಡಿದ್ದ. ಈ ವಿಚಾರವನ್ನ ಯುವತಿ ಮನೆಯವರಿಗೂ ತಿಳಿಸಿದ್ದಳು. ಕುಟುಂಬಸ್ಥರು ನಾಗೇಶನ ಅಣ್ಣನಿಗೆ ಕರೆ ಮಾಡಿ ಮತ್ತೆ ಗಲಾಟೆ ಮಾಡಿದ್ರು. ಇದೇ ಕಾರಣಕ್ಕೆ ಇಂದು ಯುವತಿ ತಂದೆಯೇ ಯುವತಿಯನ್ನ ಆಫೀಸ್‌ಗೆ ಡ್ರಾಪ್ ಮಾಡಿದ್ರು.

ಆಫೀಸ್ ಬಳಿ ಯುವತಿ ಬರ್ತಿದ್ದಂತೆ ಮೊದಲೆ ತಯಾರಾಗಿ ಬಂದಿದ್ದ ಆರೋಪಿ ನಾಗೇಶ್ ಆಫೀಸ್‌ನ ಮೆಟ್ಟಿಲ ಮೇಲೆ ಯುವತಿಗೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ. ದಾಳಿಗೆ ಒಳಗಾದ ಯುವತಿ ಸುಮಾರು 24 ವರ್ಷದವಳಾಗಿದ್ದು ಸಾಕಷ್ಟು ಓದಿಕೊಂಡಿದ್ದಾಳೆ. ಇನ್ನೂ ಈ ಕೃತ್ಯಕ್ಕೆ ಕುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ನಾಪತ್ತೆಯಾಗಿರುವ ಆರೋಪಿ ನಾಗೇಶ್‌ಗಾಗಿ ಕಾಮಾಕ್ಷಿಪಾಳ್ಯ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಯುವತಿ ಈಗಾಗಲೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಯುವತಿಯ ಬೆನ್ನು, ಎದೆ ಮತ್ತು ತಲೆಯ ಭಾಗ ಸುಟ್ಟಿದೆ ಎಂಬ ಮಾಹಿತಿಯನ್ನು ಪೊಲೀಸರಿಗೆ ವೈದ್ಯರು ತಿಳಿಸಿದ್ದಾರೆ.

-ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್

Edited By : Shivu K
PublicNext

PublicNext

28/04/2022 07:40 pm

Cinque Terre

45.6 K

Cinque Terre

2

ಸಂಬಂಧಿತ ಸುದ್ದಿ